Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇಳಿಸದ ಕಿವಿಗೆ ‘ಟೀಮ್ ಈಶ್ವರ್ ಮಲ್ಪೆ’ ಆಸರೆ: ಮೇ.12ರಂದು ಸಾಗರದಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ!

29/04/2026 9:47 PM

BREAKING: ಬೆಂಗಳೂರಲ್ಲಿ ರಣ ಮಳೆಗೆ ಮತ್ತೊಂದು ಬಲಿ: ಕರೆಂಟ್ ಶಾಕ್ ಹೊಡೆದು ವಿದ್ಯಾರ್ಥಿ ಸಾವು

29/04/2026 9:23 PM

‘ದಿಗ್ಬಂಧನ ವಿಸ್ತರಣೆಗೂ ಮುನ್ನ ಒಪ್ಪಂದಕ್ಕೆ ಸಹಿ ಹಾಕಿ’: ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!

29/04/2026 9:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಶ್ಲೀಲ ವೀಡಿಯೋ ಹಂಚಿದ ಕಾರು ಚಾಲಕ ಕಾರ್ತಿಕ್ ಎಲ್ಲಿ?: SITಗೆ ಮಾಜಿ ಸಿಎಂ HDK ಪ್ರಶ್ನೆ
KARNATAKA

ಅಶ್ಲೀಲ ವೀಡಿಯೋ ಹಂಚಿದ ಕಾರು ಚಾಲಕ ಕಾರ್ತಿಕ್ ಎಲ್ಲಿ?: SITಗೆ ಮಾಜಿ ಸಿಎಂ HDK ಪ್ರಶ್ನೆ

By kannadanewsnow0908/05/2024 5:44 PM

ಬೆಂಗಳೂರು: ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲರ್ ಎಂದಿರುವ ಡಿಸಿಎಂ ಡಿಕೆಶಿಗೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಇಡೀ ಪ್ರಕರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ವ್ಯಕ್ತಿ ನೀನು ಎಂದು ಕಿಡಿ ಕಾರಿದರು.

ನಗರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಮಾಧ್ಯಮಗಳ ಜತೆ ಮಾತನಾಡಿದರು ಅವರು, ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಲಾಗಿದ್ದ ಪೆನ್ ಡ್ರೈವ್ ಗಳನ್ನು ಹಾದಿಬೀದಿಯಲ್ಲಿ ಸುರಿದಿರುವ ಕಿಡಿಗೇಡಿಗಳನ್ನು ರಾಜ್ಯ ಸರಕಾರ ರಕ್ಷಣೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಡಿ.ಕೆ.ಶಿವಕುಮಾರ್ ಸಂಸ್ಕೃತಿ ಎಂಥದು ಎಂದು ಎಲ್ಲರಿಗೂ ಗೊತ್ತಿದೆ. ವಕೀಲರಾದ ದೇವರಾಜೇಗೌಡ ಜತೆ ಯಾಕಪ್ಪ ಮಾತಾನಾಡಿದೆ ನೀನು? ನಿನಗೇನಿತ್ತು ಅವರ ಹತ್ತಿರ ಕೆಲಸ ಡಿ.ಕೆ.ಶಿವಕುಮಾರ್? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಬ್ಲಾಕ್ ಮೇಲರ್ ಅಲ್ಲ

ಕುಮಾರಸ್ವಾಮಿ ಬ್ಲಾಕ್ ಮೇಲರ್ ಅಲ್ಲ. ಐದು ಜನರನ್ನು ಇಟ್ಟಕೊಂಡಿದ್ದೀನಿ ಅಂತ ಹೇಳಿದ್ದೀಯಾ ಅಲ್ಲವೇ ನೀನು? ನಿಮ್ಮ ಮುಖ್ಯಮಂತ್ರಿಗೆ ಮಾನ ಮರ್ಯಾದೆ ಇದೆಯಾ? ಡಾ.ಜಿ.ಪರಮೇಶ್ವರ ಅವರೇ ನಿಮಗೆ ಬೆನ್ನು ಮೂಳೆ ಇದೆಯಾ? ನನ್ನನ್ನು ಹಿಟ್ ಅಂಡ್ ರನ್ ಅಂತಾರೆ.. ಹಾಗಾದರೆ ನಿಮ್ಮದೇನು? ನಿಮ್ಮ ಎಸ್ ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಎನ್ನುವುದು ಇದೆಯಾ? ಎಂದು ಕುಮಾರಸ್ವಾಮಿ ಅವರು ಗುಡುಗಿದರು.

ನೊಂದ ಮಹಿಳೆ ಎಲ್ಲಿ ಸಿಕ್ಕಿದರೆಂದು ಹೇಳಿ?

ಕಿಡ್ನಾಪ್ ಪ್ರಕರಣದಲ್ಲಿ ಏನೇನು ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ನೊಂದ ಮಹಿಳೆ ರಾಜಗೋಪಾಲ್ ಎಂಬುವರ ತೋಟದ ಮನೆಯಲ್ಲಿ ಸಿಕ್ಕಿದರಾ? ಅಥವಾ ಅವರ ಸಂಬಂಧಿಕರ ಮನೆಯಲ್ಲಿ ಸಿಕ್ಕಿದರಾ? ಎಸ್ ಐಟಿ ಅಧಿಕಾರಿಗಳು ಹೇಳಬೇಕು. ಆ ಮಹಿಳೆ ಸಿಕ್ಕಿದ್ದು ಅವರ ಸಂಬಂಧಿಕರ ಮನೆಯಲ್ಲಿ. ಹುಣಸೂರಿನ ಪವಿತ್ರಾ ಎಂಬುವವರ ಮನೆಯಿಂದ ಕರೆದುಕೊಂಡು ಬಂದಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಕುಮಾರಕೃಪದಲ್ಲಿ ನೊಂದ ಮಹಿಳೆಯರು

12 ಜನರ ನೊಂದ ಮಹಿಳೆಯರು ಎನ್ನಲಾದ ಮಹಿಳೆಯರನ್ನು ಕುಮಾರಕೃಪಾದಲ್ಲಿ ಇಟ್ಟಿದ್ದಾರೆ. ಎಲ್ಲಾ ಸಂಚು ಮಾಡಿ ಈಗ ಅನುಕಂಪ ತೋರಿಸ್ತಾ ಇದ್ದೀರಿ ಅಲ್ಲವೇ ಶಿವಕುಮಾರ್? ನಿಮ್ಮ ಯೋಗ್ಯತೆಗೆ ಈಗ ಯಾಕೆ ಅನುಕಂಪ? ಪೆನ್ ಡ್ರೈವ್ ಲೀಕ್ ಮಾಡುವಾಗ ಆ ಮಹಿಳೆಯರ ಮುಖ ತೋರಿಸಿದ್ದೀರಿ. ಅವರ ಮಾನ ಮರ್ಯಾದೆಯನ್ನು ಹಾದಿ ಬೀದಿಯಲ್ಲಿ ಹರಾಜು ಹಾಕಿದ್ದೀರಿ. ಈಗ ನೋಡಿದರೆ ಅವರ ಬಗ್ಗೆ ಅನುಕಂಪ ತೋರಿಸುತ್ತಿರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೇವಣ್ಣ ವಿಚಾರದಲ್ಲಿ ಮಾತ್ರ ನಾನು ಹೋರಾಟ ಮಾಡುತ್ತೇನೆ. ನಮ್ಮ ಪಕ್ಷದ ಶಾಸಕ, ನನ್ನ ಸಹೋದರನಾದ್ದರಿಂದ ರೇವಣ್ಣ ಅವರ ಪರವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಪ್ರಕರಣ ಬಗ್ಗೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಚಾಲಕ ಕಾರ್ತಿಕ್ ಗೆ ಖಾಸಗಿ ವಾಹಿನಿಯಲ್ಲಿ ತರಬೇತಿ

ಪೆನ್ ಡ್ರೈವ್ ಹಂಚಿಕೆಯ ಮೂಲ ಸೂತ್ರಧಾರ ಕಾರು ಚಾಲಕ ಕಾರ್ತಿಕ್ ನನ್ನು ಖಾಸಗಿ ಚಾನೆಲ್ ಒಂದರಲ್ಲಿ ಕೂರಿಸಿ ಸೂಕ್ತ ತರಬೇತಿ ಕೊಡುವ ಕೆಲಸ ನಡೆಯುತ್ತಿದೆ. ಈ ತನಿಖೆಯ ದಿಕ್ಕು ಎತ್ತ ಸಾಗುತ್ತಿದೆ ಎನ್ನುವುದು ಅರ್ಥವಾಗುತ್ತಿದೆ ಎಂದು ಅವರು ಕಿಡಿಕಾರಿದರು.

ತಮ್ಮ ಹಳೆಯ ಪ್ರಕರಣ ಒಂದರ ವಿಚಾರವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾದ ನಂತರ ತಮಗೆ ಎದುರಾದ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಹಾಸನ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆ ಆಗಿದೆ. ಅದು ಕೆಲಸವನ್ನು ಮಾಡುತ್ತಿದೆ. ಆದರೆ, ವಿಶೇಷ ತನಿಖಾ ತಂಡಕ್ಕೆ ಸಿಗದ ಕಾರು ಚಾಲಕ ಖಾಸಗಿ ವಾಹಿನಿ ಸಿಕ್ಕಿ ಸಂದರ್ಶನ ನೀಡುತ್ತಾನೆ. ನಾನು ಗೃಹ ಸಚಿವರಿಗೆ ಪ್ರಶ್ನೆ ಕೇಳುತ್ತೇನೆ, ನಿಮ್ಮ ತನಿಖೆ ರೇವಣ್ಣ ಕೇಂದ್ರೀಕೃತವಾಗಿದೆ. ಆದರೆ, ವಿಡಿಯೋಗಳು ಬಿಡುಗಡೆ ಮಾಡಿದವರನ್ನು ಯಾಕೆ ಹೊರಗೆ ಬಿಟ್ಟಿದ್ದೀರಿ? ಅವರ ವಿರುದ್ಧ ಕ್ರಮ ಕೈಗೊಳ್ಳಿ. ಇದುವರೆಗೂ ಏನು ಮಾಡಿಲ್ಲ ಎಂದು ಕಿಡಿಕಾರಿದರು ಮಾಜಿ ಮುಖ್ಯಮಂತ್ರಿಗಳು.

ಕಾರು ಚಾಲಕ ಕಾರ್ತಿಕ್ ನ ಖಾಸಗಿ ಚಾನೆಲ್ ಅಲ್ಲಿ ಕುಳಿತು ಟ್ರೈನ್ ಅಪ್ ಮಾಡ್ತಾ ಇದ್ದಾರೆ. ಮಿಸ್ಟರ್ ಪರಮೇಶ್ವರ್ ತಾವು ಏನ್ ಮಾಡ್ತಾ ಇದ್ದೀರಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

14 ವರ್ಷದ ರೇವಣ್ಣ ಮನೆಯಲ್ಲಿ ಕೆಲಸದಲ್ಲಿ ಇದ್ದವನು ಇವನು. ಪ್ರಜ್ವಲ್ ನಡವಳಿಕೆ ಗೊತ್ತಿದ್ದ ಮೇಲೆ ಕೆಲಸ ಬಿಡಬೇಕಿತ್ತು ಅಲ್ಲವೇ? ಬಂಡೆ ಹೇಗೆ ರಕ್ಷಣೆ ಮಾಡುತ್ತೆ ಅಂತ ಕಾಯ್ತಾ ಇದ್ದಾನೆ ಅವನು. ಬಂಡೆ ರಕ್ಷಣೆ ಕೊಡುತ್ತದೆ ಎಂದು ಕಾರ್ತಿಕ್ ಅಂದುಕೊಂಡಿದ್ದಾನೆ. ಅವನು ಗಿರಿನಗರದಲ್ಲೇ ಇದ್ದಾನಂತೆ. ಬಹುಶಃ ಅವನಿಗೆ ಟ್ರೈನಿಂಗ್ ಕೊಡ್ತಾ ಇದ್ದಾರೆ ಎಂದು ಅವರು ಆರೋಪ ಮಾಡಿದರು. ನವೀನ್ ಗೌಡ, ಕಾರ್ತಿಕ್ ಹಾಗೂ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ? ಇವರು ಮೂರು ಜನರು ಎಷ್ಟು ಆಪ್ತರು, ಇವರ ಸಂಬಂಧ ಎಂಥದ್ದು, ಇವರ ಪೋಟೋಗಲೆಲ್ಲ ಎಲ್ಲಾ ಕಡೆ ವೈರಲ್ ಆಗಿವೆ. ಇದೆಲ್ಲಾ ಎಸ್ ಐಟಿ ಕಣ್ಣಿಗೆ ಬಿದ್ದಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನಿಸಿದರು.

ಈಗ ನೋಡಿದರೆ ಇಡೀ ಪ್ರಕರಣ ರೇವಣ್ಣ ಅವರ ಸುತ್ತ ಮಾತ್ರ ಸುತ್ತುತ್ತಿದೆ. ಅವರಿಗೆಮಾತ್ರ ನೋಟಿಸ್ ‌ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ನನ್ನನ್ನು ಜೈಲಿಗೆ ಕಳಿಸಲು ಹೊಂಚು ಹಾಕಿದ್ದರು

ಹಿಂದೆ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಕೆಂಪಯ್ಯ ಎಂಬ ವ್ಯಕ್ತಿಯನ್ನು ಇಟ್ಟುಕೊಂಡು ನನ್ನನ್ನು ಬಂಧಿಸಬೇಕು ಎಂದು ಸಂಚು ಮಾಡಿದ್ದರು. ಅವರ ಆಸೆ ಈಡೇರಲಿಲ್ಲ. ನನ್ನನ್ನು ಒಂದು ದಿನವಾದರೂ ಅರೆಸ್ಟ್ ಮಾಡಿಸಿ ಜೈಲಿಗೆ ಕಲಿಸಬೇಕು ಎಂದು ಹೊಂಚು ಹಾಕಿದ್ದರು. ವಕೀಲರು ವಿಚಾರಣೆ ಹೋಗಬೇಡಿ ಇದನ್ನು ಸಲಹೆ ಮಾಡಿದ್ದರು. 2,900 ಮಹಿಳೆಯರು ಇರುವ ಪ್ರಕರಣ ಎಂದು ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಯಾವುದೇ ಕೇಸ್ ಆಗಿಲ್ಲ ಎಂದು ತನಿಖೆಯ ಗತಿಯನ್ನು ಮಾಜಿ ಮುಖ್ಯಮಂತ್ರಿಗಳು ಎಳೆಎಳೆಯಾಗಿ ಬಿಡಿಸಿಟ್ಟರು.

‘ಪೂಂಚ್’ನಲ್ಲಿ ವಾಯುಪಡೆಯ ವಾಹನಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಮೊದಲ ಚಿತ್ರಗಳು ರಿವೀಲ್

ಈ ಅವಧಿಯ ನಂತ್ರ ಈ ಖಾತೆಗಳನ್ನ ಮುಚ್ಚಲಾಗುವುದು : ಗ್ರಾಹಕರಿಗೆ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ ಎಚ್ಚರಿಕೆ

Share. Facebook Twitter LinkedIn WhatsApp Email

Related Posts

ಕೇಳಿಸದ ಕಿವಿಗೆ ‘ಟೀಮ್ ಈಶ್ವರ್ ಮಲ್ಪೆ’ ಆಸರೆ: ಮೇ.12ರಂದು ಸಾಗರದಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ!

29/04/2026 9:47 PM2 Mins Read

BREAKING: ಬೆಂಗಳೂರಲ್ಲಿ ರಣ ಮಳೆಗೆ ಮತ್ತೊಂದು ಬಲಿ: ಕರೆಂಟ್ ಶಾಕ್ ಹೊಡೆದು ವಿದ್ಯಾರ್ಥಿ ಸಾವು

29/04/2026 9:23 PM1 Min Read

30 ಕೋಟಿ ವೆಚ್ಚದಲ್ಲಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ: ಮದ್ದೂರು ಶಾಸಕ ಕೆ.ಎಂ.ಉದಯ್

29/04/2026 9:07 PM1 Min Read
Recent News

ಕೇಳಿಸದ ಕಿವಿಗೆ ‘ಟೀಮ್ ಈಶ್ವರ್ ಮಲ್ಪೆ’ ಆಸರೆ: ಮೇ.12ರಂದು ಸಾಗರದಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ!

29/04/2026 9:47 PM

BREAKING: ಬೆಂಗಳೂರಲ್ಲಿ ರಣ ಮಳೆಗೆ ಮತ್ತೊಂದು ಬಲಿ: ಕರೆಂಟ್ ಶಾಕ್ ಹೊಡೆದು ವಿದ್ಯಾರ್ಥಿ ಸಾವು

29/04/2026 9:23 PM

‘ದಿಗ್ಬಂಧನ ವಿಸ್ತರಣೆಗೂ ಮುನ್ನ ಒಪ್ಪಂದಕ್ಕೆ ಸಹಿ ಹಾಕಿ’: ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!

29/04/2026 9:08 PM

30 ಕೋಟಿ ವೆಚ್ಚದಲ್ಲಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ: ಮದ್ದೂರು ಶಾಸಕ ಕೆ.ಎಂ.ಉದಯ್

29/04/2026 9:07 PM
State News
KARNATAKA

ಕೇಳಿಸದ ಕಿವಿಗೆ ‘ಟೀಮ್ ಈಶ್ವರ್ ಮಲ್ಪೆ’ ಆಸರೆ: ಮೇ.12ರಂದು ಸಾಗರದಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ!

By kannadanewsnow0929/04/2026 9:47 PM KARNATAKA 2 Mins Read

ಶಿವಮೊಗ್ಗ: ಇಂದಿನ ಒತ್ತಡದ ಜೀವನಶೈಲಿ ಹಾಗೂ ವಯೋಸಹಜ ಕಾರಣಗಳಿಂದ ಅನೇಕರು ಶ್ರವಣ ದೋಷಕ್ಕೆ (ಕೇಳಿಸಿಕೊಳ್ಳುವ ಸಮಸ್ಯೆ) ಒಳಗಾಗುತ್ತಿದ್ದಾರೆ. ಇಂತಹವರಿಗೆ ನೆರವಾಗುವ…

BREAKING: ಬೆಂಗಳೂರಲ್ಲಿ ರಣ ಮಳೆಗೆ ಮತ್ತೊಂದು ಬಲಿ: ಕರೆಂಟ್ ಶಾಕ್ ಹೊಡೆದು ವಿದ್ಯಾರ್ಥಿ ಸಾವು

29/04/2026 9:23 PM

30 ಕೋಟಿ ವೆಚ್ಚದಲ್ಲಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ: ಮದ್ದೂರು ಶಾಸಕ ಕೆ.ಎಂ.ಉದಯ್

29/04/2026 9:07 PM

ಬೆಂಗಳೂರಲ್ಲಿ ವರುಣನ ಆರ್ಭಟಕ್ಕೆ ಕಾಂಪೌಂಡ್ ಕುಸಿದು 7 ಮಂದಿ ಬಲಿ; ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಣೆ

29/04/2026 8:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.