ಗೌರಿಬಿದನೂರು: ಮಹಾರಾಷ್ಟ್ರ – ಕರ್ನಾಟಕದ ಗಡಿ ವಿವಾದ ಮತ್ತ ತಾರಕಕ್ಕೇರಿದೆ. ಈ ಬೆನ್ನಲ್ಲೇ ಒಂದು ದೇಶ ಎನ್ನುವಂತ ಬಿಜೆಪಿಗೆ ಬೆಳಗಾವಿ ಎಲ್ಲಿದ್ದರೇನು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Former CM HD Kumaraswamy ) ಪ್ರಶ್ನಿಸಿದ್ದಾರೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಸಂವಿಧಾನದ ಪ್ರತಿ ಹಂಚಿಕೆ – ಸಿಎಂ ಬೊಮ್ಮಾಯಿ
ಇಂದು ಗೌರಿಬಿದನೂರಿನಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದಂತ ಅವರು, ಬೆಳಗಾವಿಯನ್ನು ಲಪಟಾಯಿಸುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ. ಒಂದು ದೇಶ ಎನ್ನುವ ಬಿಜೆಪಿಗೆ ಬೆಳಗಾವಿ ಎಲ್ಲಿದ್ದರೇನು? ಬೆಳಗಾವಿ ಕರ್ನಾಟಕದಲ್ಲಿ ಇದೆ. ಇರಲು ಬಿಡಿ. ಬೆಳಗಾವಿಯನ್ನು ಹೊಡೆದುಕೊಳ್ಳುವ ದುಷ್ಟತನ ಏಕೆ? ಇಂದು ಸಂವಿಧಾನ ರಚನಾ ದಿನ. ದೇಶವನ್ನು ಒಂದು ತತ್ವದಡಿ ಒಂದು ಮಾಡಿರುವ ಸಂವಿಧಾನದ ಜಪ ಮಾಡುತ್ತಲೇ ಬಿಜೆಪಿ ಗಡಿ ವಿಷಯದಲ್ಲಿ ಒಡೆದಾಳುತ್ತಿದೆ ಎಂದರು.
ನೆಲ ಜಲದ ಭಾಷೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ನೆರಯ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದ ಜತೆ ಗಡಿ ಗಲಾಟೆ ಇಲ್ಲ. ಈ ರಾಜ್ಯಗಳು ಸೌಹಾರ್ದವಾಗಿ ಬಾಳುತ್ತವೆ. ಮಹಾರಾಷ್ಟ್ರ ಮಾತ್ರ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಾಕ್ಷಣ ಬೆಳಗಾವಿ ಗಡಿ ಭಾಗ ನಮ್ಮದು ಅಂತಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಗುಡುಗಿದರು.
ಸರ್ ರೈತರ ಸಾಲಮನ್ನಾ ಮಾಡುವಿರಾ.? ಏಯ್ ನೆಕ್ಸ್ಟ್ ಪ್ರಶ್ನೆ ಕೇಳಪ್ಪ: ಸಿಎಂ ಬೊಮ್ಮಾಯಿ ಉತ್ತರ
ನಾವೆಲ್ಲಾ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಸಂವಿಧಾನ ರಚನಾ ದಿನ ಇಂದು. ಇಂದು ಸಂವಿಧಾನಕ್ಕೆ ಅಪಚಾರ ಮಾಡುವಂತೆ ಗಡಿ ಕ್ಯಾತೆ ತೆಗೆದಿದ್ದಾರೆ. ಬಿಜೆಪಿ ಸಂವಿಧಾನಕ್ಕೆ ಅಪಚಾರ ಮಾಡಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಬೆಳಗಾವಿ ಜಿಲ್ಲೆಯನ್ನು ಉತ್ತಮವಾಗಿ ಅಭಿವೃದ್ಧಿ ಮಾಡಿದ್ದೇವೆ. ಕಳೆದ 10 ವರ್ಷದಲ್ಲಿ 27 ಸಕ್ಕರೆ ಕಾರ್ಖಾನೆ ಆಗಿದೆ. ವಾಣಿಜ್ಯ ನಗರವಾಗಿದೆ, ಆದಾಯ ಬರ್ತಿದೆ. ಇದನ್ನ ಬಿಜೆಪಿ ಲೂಟಿ ಮಾಡಲು ಹೊರಟಿದೆ. ಬೆಳಗಾವಿಯನ್ನು ಹೊಡೆದುಕೊಂಡು ಹೋಗಲು ಬಿಜೆಪಿ ಹೊರಟಿದೆ. ಇದು ಸಾಧ್ಯವಿಲ್ಲ ಎಂದು ಹೇಳಿದರು.