ಕೆಎನ್‌ಎನ್‌ಸಿನಿಮಾಡೆಸ್ಕ್: ಬಿಗ್ ಬಾಸ್ ಮೂಲಕ ಗುರುತಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಇನ್ನೂ ನೆಲೆ ನಿಲ್ಲದ ನಟ ಪ್ರಥಮ್ ವರ್ತನೆ ಬಗ್ಗೆ ಇತ್ತೀಚಿಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ನಟ ಒಳ್ಳೆ ಹುಡುಗ? ಪ್ರಥಮ್ ಅವರ ಮಾತುಗಳನ್ನು ಗಮನಿಸಿದರೆ ಅವರ ಬಗ್ಗೆ ಅಸಹ್ಯ ಹುಟ್ಟವುದು ಸಹಜ ಎನ್ನುತ್ತಿದ್ದಾರೆ ಜನತೆ. ಬ್ರೈನ್‌ಗೂ ನಾಲಿಗೆಗೆ ಕಂಟ್ರೋಲ್ ತಪ್ಪಿದವರ ರೀತಿ ನಡೆದುಕೊಳ್ಳುವ ವ್ಯಕ್ತಿ ತಮ್ಮ ಮಾತಿನಲ್ಲಿ ಹಿಡಿತ ಹಿಡಿದಕೊಳ್ಳದೇ ತಿ…ಲು ರೀತಿಯಲ್ಲಿ ಮಾತನಾಡುವುದು ಅವರ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನ ಮೂಡಿಸುತ್ತದೆ ಎನ್ನುತ್ತಾರೆ ಹಲವು ಮಂದಿದೆ.
ಸ್ಯಾಂಡಲ್‌ವುಡ್‌ನಲ್ಲಿ ಹಲವು ಮಂದಿ ಈಗಲೂ ಕೂಡ ತಮ್ಮ ಸ್ಟಾರ್ ಗಿರಿಯನ್ನು ಪಕ್ಕಕ್ಕೆ ಇಟ್ಟು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರೋದು ನಮ್ಮಲ್ಲಿ ಕಾಣಬಹುದು, ತಾನು ಅಭಿನಯ ಮಾಡಿರೋ ಎರಡು ಮೂರು ಸಿನಿಮಾಕ್ಕೆ ಈ ವ್ಯಕ್ತಿ ಹೀಗೆ ಪೆದ್ದು ಪೆದ್ದು ರೀತಿಯಲ್ಲಿ ಆಡೋದು ಸಿನಿಮಾ ರಂಗದಲ್ಲಿ ಹಲವು ದಿನ ಉಳಿದುಕೊಳ್ಳುವುದಿಲ್ಲ ಎನ್ನುವುದು ಗಾಂಧಿ ನಗರ ಮಂದಿಯ ಮಾತಾಗಿದೆ. ಸಿನಿಮಾ ರಂಗದಲ್ಲಿ ಸ್ಟಾರ್‌ಗಳನ್ನು ಬಿಡದ ಜನತೆ, ಇನ್ನೂ ಯಾವುದಕ್ಕೂ ಬಾರದ ಪ್ರಥಮ್ ಅವರನ್ನು ಬಿಡುತ್ತಾರ? ಒಂದಲ್ಲ ಒಂದು ದಿನ ಮನೆಗೆ ಕಳುಹಿಸುತ್ತಾರೆ ಎನ್ನುತ್ತಿದ್ದಾರೆ.
ಅದೆಲ್ಲ ಓಕೆ ಮೈಕ್ ಸಿಕ್ಕಾಗ ಪ್ರಥಮ್ ಆಡೋದು ಕೂಡ ಹಲವು ಮಂದಿಗೆ ಹೇಸಿಗೆ ಹುಟ್ಟಿಸಿದೆ, ಈತನ ವಿಡಿಯೋ ಬಂದರೆ ಸಾಕು ಹಲವು ಮಂದ ಚಾನೆಲ್ ಬದಲಾವಣೆ ಮಾಡುತ್ತಾರೆ, ಇಲ್ಲವೇ ಟಿವಿ ಆಫ್ ಸುಮ್ನೆ ಆಗುತ್ತಾರೆ. ಇಂತಹ ವ್ಯಕ್ತಿಯನ್ನು ಇಟ್ಟುಕೊಂಡು ಯಾರು ಸಿನಿಮಾ ಮಾಡ್ತಾರೆ ಎನ್ನುವುದು ಈಗ ಪ್ರಶ್ನೆಯಾಗಿದೆ. ಏನೇ ಆಗಲಿ ಪ್ರಥಮ್‌ಗೆ ಒಳ್ಳೇ ಬುದ್ದಿ ಬರಲಿ, ಮನಸ್ಸು ಮತ್ತು ನಾಲಿಗೆ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲಿ. ಯಶಸ್ಸು ಕಾಣದೇ ಇರೋವ ವ್ಯಕ್ತಿ, ಮುಂದೆ ಯಶಸ್ಸು ಸಿಗದೇ ಇದ್ದರೇ ಚೆನ್ನ ಅಂಥ ಹಲವು ಮಂದಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಆದ್ರೂ ಪ್ರಥಮ್ ಬದಲಾಗುತ್ತಾರ? ಮಾತನಾಡುವ ಮುನ್ನ ಯೋಚನೆ ಮಾಡುತ್ತಾರ? ಇಲ್ಲವೇ ಸ್ಯಾಂಡಲ್‌ವುಡ್‌ನಲ್ಲಿ ನೆಲೆಕಂಡು ಕೊಳ್ಳದೇ ಊರಿಗೆ ಹೋಗುತ್ತಾರ? ಕಾದು ನೋಡೋಣ