ಬೆಂಗಳೂರು : ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ತೀವ್ರ ಚುನಾವಣೆಯ ರಂಗೇರಿದ್ದು , ಎಚ್ ಡಿ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಈ ಒಂದು ಚುನಾವಣೆಯಲ್ಲಿ ಅರ್ಜುನನಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಚುನಾವಣೆಯಲ್ಲಿ ಸೋತಾಗ ಅರ್ಜುನ ಅಭಿಮನ್ಯು ಆಗಿರಲಿಲ್ಲವೇ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಿಖಿಲ್ ಚುನಾವಣೆಯಲ್ಲಿ ಎರಡು ಬಾರಿ ಸೋತಿದ್ದಾರೆ. ಆಗ ಅರ್ಜುನ ಮತ್ತು ಅಭಿಮನ್ಯು ಆಗಿರಲಿಲ್ವಾ? ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಮಂಡ್ಯದಲ್ಲಿ ಸೋತಿದ್ದಾರೆ. ರಾಮನಗರದಲ್ಲಿ ಸೋತಿದ್ದಾಗ ಆಗ ಅಭಿಮನ್ಯು ಆಗಿರಲಿಲ್ವಾ? ಈಗ ಇದಕ್ಕಿದಂತೆ ಅದೇನು ಅರ್ಜುನ ಅಭಿಮನ್ಯು ಅಂತ ವ್ಯಂಗವಾಡಿದರು.
ಸಚಿವರು ಶಾಸಕರು ಎಂಎಲ್‌ಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಪದಾಧಿಕಾರಿಗಳು, ಶಾಸಕರು, ಸಚಿವರ ಜೊತೆಗೆ ಸಭೆ ನಡೆಸಿದ್ದೇವೆ. ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾವಿ ಉಪಚುನಾವಣೆಯ ಬಗ್ಗೆ ಚರ್ಚಿಸಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಕೆಲ ಸಚಿವರು ಗೈರಾಗಿದ್ದಕ್ಕೆ ವಿಚಾರವಾಗಿ ಸುರ್ಜೆವಲ ಸಿಟ್ಟಾಗಿದ್ದ ವಿಚಾರವಾಗಿ, ಪ್ರತಿಕ್ರಿಯೆ ನೀಡಿದ ಅವರು, 13 ಸಚಿವರು ಸಭೆಯಲ್ಲಿ ಭಾಗಿಯಾಗಿದ್ದರು. ದೀಪಾವಳಿ ಹಿನ್ನೆಲೆಯಲ್ಲಿ ಕೆಲವು ಸಚಿವರು ಸಭೆಗೆ ಬಂದಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.