ಬೆಂಗಳೂರು : ನಟ ದರ್ಶನ್ ಪರಪ್ಪರ ಅಗ್ರಹಾರ ಜೈಲು ಸೇರಿದ್ದಾರೆ. 13 ವರ್ಷದ ಹಿಂದೆಯೂ ಅವರು ಅದೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆಗ ಜೈಲಧಿಕಾರಿಯಾಗಿದ್ದ ಸತೀಶ್, ದರ್ಶನ್ ಬಗ್ಗೆ ಮಾತನಾಡಿದ್ದು, ಆತನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿಲ್ಲ. ಆತನಿಗೆ ಪಶ್ಚಾತ್ತಾಪ ಎಂಬುದು ಇಲ್ಲ ಎಂದಿದ್ದಾರೆ.
ದರ್ಶನ್ ಅನ್ನು ಈ ಹಿಂದೆ ಅದೇ ಜೈಲಿನಲ್ಲಿ ನೋಡಿದ್ದ ಅಧಿಕಾರಿಯೊಬ್ಬರು ಬೇರೆಯದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಈ ಹಿಂದೆಯೂ ಸಹ ದರ್ಶನ್ ತಪ್ಪು ಮಾಡಿ ಜೈಲು ಸೇರಿದ್ದರು, ಆಗ ಪಶ್ಚಾತ್ತಾಪ ಪಡುತ್ತಿರುವುದಾಗಿಯೂ ಹೇಳಿದ್ದರು. ಆದರೆ ಅವರಲ್ಲಿ ವರ್ತನೆಯಲ್ಲಿ, ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯೂ ಆಗಿಲ್ಲ’ ಎಂದಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಜೈಲು ಸೇರಿದ್ದಾರೆ. ನಟ ದರ್ಶನ್ ಜೈಲು ಸೇರಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಪತ್ನಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ ಅವರು ಜೈಲು ಸೇರಿದ್ದರು. ಈ ವೇಳೆ ಆಗಿನ ಜೈಲಿನ ಅಸಿಸ್ಟೆಂಟ್ ಸೂಪರ್ಡಿಯಂಟ್ ಜೈಲರ್ ಆಗಿದ್ದ ಅಂದಿನ ನಟ ದರ್ಶನ್ ಅವರ ಕುರಿತು ಕೆಲವು ಮಾತುಗಳಾಡಿದ್ದಾರೆ. ಆದರೆ ಅಂದು ನಟ ದರ್ಶನ್ ಅವರ ಬೇಟೆಗೆ ಪತ್ನಿ ವಿಜಯಲಕ್ಷ್ಮಿ ಬಂದು ಏನು ಮಾತಾಡಿದ್ದಾರೆ ಎಂಬುದರ ಕುರಿತು ನಿವೃತ್ತ ಜೈಲರ್ ಸತೀಶ್ ತಿಳಿಸಿದ್ದಾರೆ.
ಆ ಸಮಯದಲ್ಲಿ ನಟ ದರ್ಶನ್ ಅವರು ಬಹಳ ಬೇಸರವಾಗಿದ್ದರು. ಅವರ ಹೆಂಡತಿ ವಿಜಯಲಕ್ಷ್ಮಿ ಅವರ ಮಗು ಕರೆದುಕೊಂಡು ಜೈಲಿಗೆ ದರ್ಶನ್ ಅವರನ್ನು ಭೇಟಿ ಮಾಡಲು ಬಂದರು. ಈ ವೇಳೆ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ದರ್ಶನ್ಗೆ ಸಮಾಧಾನ ಮಾಡಿದ್ದು, ಆಗಿದ್ದಾಯ್ತು ಚೆನ್ನಾಗಿರೊನ ಇವೆಲ್ಲ ಮರೆತುಬಿಡಿ ಅಂತ ಹೇಳಿದರು. ದರ್ಶನ್ ಕೂಡ ನನ್ನ ಕ್ಷಮಿಸು ಇದೆಲ್ಲ ಆಗಬಾರದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಬೆಳೆಯೋ ಮಗ ಇಲ್ಲಿದ್ದಾನೆ ಏನಕ್ಕೆ ಈ ರೀತಿ ಆಯ್ತು ಅಂತ ಗೊತ್ತಾಗಲಿಲ್ಲ. ನನ್ನ ಕುಟುಂಬದಲ್ಲಿ ಯಾಕೆ ಹೀಗಾಯ್ತು ಅಂತ ಬಹಳ ಫೀಲ್ ಆಗ್ತಿದೆ ಮುಂದೆ ಜೈಲಿನಿಂದ ಬಿಡುಗಡೆಯಗುವ ವೇಳೆ ನನ್ನ ಮಗನ್ನ ಮತ್ತು ಹೆಂಡತಿಯನ್ನು ಬಹಳ ಚೆನ್ನಾಗಿ ನೋಡುಕೊಳ್ಳುತ್ತೇನೆ. ಇಷ್ಟು ದಿನ ನನಗೆ ಎಲ್ರು ಸಹಾಯ ಮಾಡಿದ್ದೀರಿ. ಇನ್ನೂ ಮುಂದೆ ಎಂದಿಗೂ ಈ ಥರ ತಪ್ಪು ಮಾಡಲ್ಲ ಬರ್ತೀನಿ ಅಂತ ಎಲ್ಲರಿಗೂ ಕೈ ಮುಗಿದು ಹೋದರು.
ಆ ಟೈಮಲ್ಲಿ ನಾವು ಇವರನ್ನು ಹೊರಗಡೆ ಕಳಿಸುವುದು ದೊಡ್ಡದಾಗಿತ್ತು. ಬರ್ತೀನಿ ಹೋಗಿ ಬರ್ತೀನಿ ಅಂತ ಹೇಳಿ ಹೋಗಿದ್ದು ಮತ್ತೆ ತಿರಗ ಜೈಲಿಗೆ ಬಂದಿದ್ದಾರೆ ಅಂತ ಟಿವಿ ಅಲ್ಲಿ ತೋರಿಸಿದಾಗ ಕಾಕತಾಳಿಯೋ ಏನೋ ಎಂಬಂತಾಗಿದೆ.ಆ ವ್ಯಕ್ತಿ ತಿರುಗಿ ಬಂದರಲ್ಲ ಇಷ್ಟೊಂದು ದಾನ, ಧರ್ಮ ಮಾಡಿ ಎಲ್ಲಾ ಪ್ರಾಣಿ ಪಕ್ಷಿಗಳ ಬಗ್ಗೆ ಅನುಕಂಪ ತೋರಿದ ವ್ಯಕ್ತಿ, ಈ ಕೆಸ್ ಇವರ ಸುತ್ತು ಯಾಕೆ ಸುತ್ತಿ ಕೊಂಡಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.