ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾಂಗ್ರೆಸ್ ಸರಕಾರ ಕೊಟ್ಟ ಬೆಲೆ ಏನು ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ, ವಿಪಕ್ಷದ ನಾಯಕರು ಒಂದು ವಿಚಾರದಲ್ಲಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದ ತಕ್ಷಣ ಎಚ್ಚತ್ತುಕೊಳ್ಳಬೇಕು; ಅದನ್ನು ಪರಿಹರಿಸಬೇಕು. ಆದರೆ, ಈ ಸರಕಾರ ಅತ್ತ ಗಮನ ಕೊಟ್ಟಿಲ್ಲ ಎಂದು ತಿಳಿಸಿದರು.
ಕಾನೂನು- ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟ ಕುರಿತು ತಿಂಗಳುಗಟ್ಟಲೆ ಕಾಲ ಬಿಜೆಪಿ ತಿಳಿಸಿದ್ದರೂ ಈ ಮಾನಗೇಡಿ ಸರಕಾರ ಎಚ್ಚತ್ತುಕೊಂಡಿಲ್ಲ; ಅದನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು. ಅತ್ಯಾಚಾರ, ಲವ್ ಜಿಹಾದ್ ವಿಚಾರದಲ್ಲಿ ಸರಕಾರ ಗಮನ ಕೊಡುತ್ತಿಲ್ಲ. ಕೊಲೆಗಳೂ ಹೆಚ್ಚಾಗಿವೆ. ನಿನ್ನೆ ಕಸ್ಟಡಿ ಸಾವು ಸಂಭವಿಸಿದೆ. ಯಾರಾದರೂ ಇವುಗಳ ಕುರಿತು ಪ್ರಶ್ನಿಸಿದರೆ ಎಲ್ರೀ ಹದಗೆಟ್ಟಿದೆ ಎಂದು ಉಡಾಫೆ ಮಾತನಾಡುತ್ತಾರೆ ಎಂದು ದೂರಿದರು.
ಗುಲ್ಬರ್ಗಕ್ಕೆ ಪಿಎಚ್‍ಡಿ ಮಾಡಲೆಂದು ಹೋಗಿದ್ದ ದಲಿತ ಸಾಹಿತಿ ಆನಂದ್ ಸಾವನ್ನಪ್ಪಿದ್ದು ಯಾಕೆ? ಇದರ ಬಗ್ಗೆ ಜಿಲ್ಲಾ ಸಚಿವರು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ತಲೆಕೆಡಿಸಿಕೊಂಡಿಲ್ಲ. ಏನಾದರೂ ಕೇಳಿದರೆ ಬೇರೆ ಸರಕಾರ ಇದ್ದಾಗ ಮರ್ಡರ್ ಆಗಿಲ್ವ? ಎಂದು ಕೇಳುತ್ತಾರೆ. ಇದು ಉಡಾಫೆ ಉತ್ತರವಲ್ಲವೇ ಎಂದು ಕೇಳಿದರು.
ನೀವು ಕೇವಲ ಲೂಟಿ ಮಾಡಲೆಂದು ಬಂದಿದ್ದೀರಾ? ಎಂದರಲ್ಲದೆ, ಇಡೀ ದೇಶದಲ್ಲಿ ನಡೆಯುವ ಚುನಾವಣೆಗೆ ಕರ್ನಾಟಕ ಎಟಿಎಂ ಆಗಿದೆ ಎಂದು ಅವರು ತಿಳಿಸಿದರು. ಪಂಚರಾಜ್ಯ ಚುನಾವಣೆಗೆ ದುಡ್ಡು ಕೊಟ್ಟಿದ್ದಾಯ್ತು. ಈಗ ಸಂಸತ್ ಚುನಾವಣೆಗೂ ದುಡ್ಡು ಕೊಟ್ಟಿದ್ದಾಯ್ತು. ನಮ್ಮ ಮೇಲೆ 40 ಪರ್ಸೆಂಟ್ ಸರಕಾರ ಎಂದು ಹೇಳಿದ ನೀವು, ಈಗ ನಿಮ್ಮದು ಎಷ್ಟು ಪರ್ಸೆಂಟ್ ಸರಕಾರ ಎಂದು ಉತ್ತರ ಕೊಡಿ ಎಂದು ಆಗ್ರಹಿಸಿದರು.
ಈ ಸರಕಾರ ನಮ್ಮ ರಕ್ತ ಹೀರುತ್ತಿದೆ. ಶೇ 60ರಷ್ಟು ಕಮಿಷನ್ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂದು ಅವರು ಗಮನ ಸೆಳೆದರು. ಈ ಸರಕಾರ ಒಂದು ತುಂಡು ಗುತ್ತಿಗೆಯನ್ನೂ ಕೊಟ್ಟಿಲ್ಲ. ನಮ್ಮ ಸರಕಾರದ ಕಾಮಗಾರಿಗಳಿಗೆ ಶೇ 60 ಕಮಿಷನ್ ಹೊಡೆಯುತ್ತಿದೆ ಎಂದರೆ ಈ ಸರಕಾರದ ಪರಿಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ‘ಸಿಎಂ, ಡಿಸಿಎಂ’: ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಭಕ್ತರು
ರಾಹುಲ್ ದ್ರಾವೀಡ್ ಬದಲಿಗೆ ʻಟೀಂ ಇಂಡಿಯಾʼದ ನೂತನ ಕೋಚ್ ಆಗಿ ʻಗೌತಮ್ ಗಂಭೀರ್ʼ ಆಸಕ್ತಿ : ವರದಿ