ಬೆಂಗಳೂರು: ‘ಯಡಿಯೂರಪ್ಪನವರು ( BS Yediyurappa ) ನಿನ್ನೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ( Congress ) ಯಡಿಯೂರಪ್ಪನವರ ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರಗಳನ್ನು ವಿಧಾನ ಮಂಡಳದ ಒಳಗೆ ಹಾಗೂ ಹೋರಗೆ ಟೀಕಿಸಿದೆ. ಆದರೆ ಯಡಿಯೂರಪ್ಪನವರು ಹಿರಿಯ ರಾಜಕಾರಣಿಯಾಗಿದ್ದು, ಅವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಇದುವರೆಗೂ ಅವರನ್ನು ಯಾವ ಕಾರಣಕ್ಕೆ ಕೆಳಗಿಳಿಸಲಾಯಿತು ಎಂಬುದರ ಬಗ್ಗೆ ಬಿಜೆಪಿ ಸೂಕ್ತ ಕಾರಣ ನೀಡಿಲ್ಲ ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ( KPCC communication department vice-president Ramesh Babu ) ಹೇಳಿದ್ದಾರೆ.
ಸಚಿವ ಅಶ್ವತ್ಥನಾರಾಯಣ ವಿರುದ್ಧ ಸ್ಪೋಟಕ ಬಾಂಬ್ ಸಿಡಿಸಿದ ಮಾಜಿ MLC ರಮೇಶ್ ಬಾಬು: ನ್ಯಾಯಾಂಗ ತನಿಖೆಗೆ ಆಗ್ರಹ
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಕೇರಳದಲ್ಲಿ 85 ವರ್ಷದ ಹಿರಿಯರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರಕಟಿಸಿದ್ದ ಬಿಜೆಪಿ ಯಡಿಯೂರಪ್ಪನವರಗೆ 75 ವರ್ಷವಾಯಿತು ಎಂಬ ವಿಚಾರವಾಗಿ ಹುದ್ದೆಯಿಂದ ಕೆಳಗಿಳಿಸಯಾಯಿತೇ? ಬಿಜೆಪಿ ನಾಯಕರೇ ಹೇಳುವಂತೆ ಅಪ್ಪ ಮಕ್ಕಳನ್ನು ಹೊರಗಿಟ್ಟು ಪಕ್ಷವನ್ನು ಕಟ್ಟಬೇಕು ಎಂಬ ಕಾರಣಕ್ಕೆ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತೇ? ಎಂದು ಪ್ರಶ್ನಿಸಿದರು
ಯಡಿಯೂರಪ್ಪನವರ ಅಗತ್ಯ ಪಕ್ಷಕ್ಕೆ ಇನ್ನು ಅಗತ್ಯವಿಲ್ಲ ಎಂಬ ಕಾರಣಕ್ಕೆ ಅವರನ್ನು ಮೂಲೆಗುಂಪು ಮಾಡಲಾಯಿತೇ? ಅಥವಾ ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್ ಪಕ್ಷ ಮಾಡಿದ ಭ್ರಷ್ಟಾಚಾರ ಆರೋಪಗಳು ನಿಜ ಎಂದು ಅವರಿಂದ ರಾಜೀನಾಮೆ ಪಡೆಯಲಾಯಿತೇ? ಯಡಿಯೂರಪ್ಪನವರು ತಮ್ಮ ರಾಜೀನಾಮೆಗೆ ಏನೇ ಕಾರಣ ಕೊಟ್ಟರೂ ಇದುವರೆಗೂ ಪಕ್ಷದ ವತಿಯಿಂದ ಯಾವುದೇ ಸಮರ್ಥನೆ ವ್ಯಕ್ತವಾಗಿಲ್ಲ. ಹೀಗಾಗಿ ಯಾವ ಕಾರಣಕ್ಕೆ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದು ಬಿಜೆಪಿ ಕಾರಣವನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ನನ್ನ ಲೆವಲ್ ಗೆ ಮಾತನಾಡೋರು ಇದ್ದರೇ ನಾನು ಮಾತನ್ನಾಡುತ್ತೇನೆ, ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು – DKS