ಗುವಾಹಟಿ (ಅಸ್ಸಾಂ): ಅಸ್ಸಾಂನ ಬ್ರುಗಢ್ನ ಭೋಗಾಲಿ ಪಥರ್ ಗ್ರಾಮವೊಂದರ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ(African Swine Fever) ಕಾಣಿಸಿಕೊಂಡಿದ್ದು, 1 ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳನ್ನು ‘ಸೋಂಕಿತ ವಲಯ’ ಎಂದು ಘೋಷಿಸಲಾಗಿದೆ.
“ನಾವು ಈ ರೋಗ ವರದಿಯಾದ ನಂತ್ರ ,1 ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳನ್ನು ‘ಸೋಂಕಿತ ವಲಯ’ ಎಂದು ಗೊತ್ತುಪಡಿಸಲಾಗಿದ್ದು, ಆ ಪ್ರದೇಶಗಳಲ್ಲಿನ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ. ಏಕಕಾಲದಲ್ಲಿ, ನಾವು ಇಡೀ ಪ್ರದೇಶವನ್ನು ಶುಚಿಗೊಳಿಸಿದ್ದೇವೆ” ಎಂದು ಡಾ ಬರುವಾ ಹೇಳಿದ್ದಾರೆ.
ಇಲ್ಲಿಯವರೆಗೆ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ತ್ರಿಪುರಾ ಮತ್ತು ಮೇಘಾಲಯದಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷವೂ ಈಶಾನ್ಯ ರಾಜ್ಯಗಳು ಆಫ್ರಿಕನ್ ಹಂದಿ ಜ್ವರವನ್ನು ಎದುರಿಸಿದ್ದವು. ಕಳೆದ ವರ್ಷ ಸುಮಾರು 11,000 ಹಂದಿಗಳನ್ನು ಕೊಲ್ಲಲಾಗಿದ್ದು, ಹಂದಿಗಳಿಗೆ ಸುಮಾರು 12 ಕೋಟಿ ರೂಪಾಯಿ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿದೆ.
Breaking news: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಪಿ.ವಿ ಸಿಂಧುಗೆ ಚಾಂಪಿಯನ್ ಪಟ್ಟ
ತಿಂಗಳಿಗೆ ಒಂದೇ ಪಿಜ್ಜಾ, 15 ದಿನಕ್ಕೊಮ್ಮೆ ಮಾತ್ರ ಶಾಪಿಂಗ್: ವೈರಲ್ ಆಯ್ತು ನವ ದಂಪತಿಯ ʻWedding contractʼ