ವಡೋದರಾದಲ್ಲಿ, 87 ವರ್ಷದ ಪತ್ನಿಯೊಬ್ಬಳು ತನ್ನ 89 ವರ್ಷದ ಪತಿಯ ಲೈಂಗಿಕ ಬೇಡಿಕೆಗಳಿಂದ ಬೇಸತ್ತು ಗುಜರಾತ್ನ ಟೋಲ್-ಫ್ರೀ ಮಹಿಳಾ ಸಹಾಯವಾಣಿ ಸಂಖ್ಯೆ -181 ಅಭಯಮ್ಗೆ ಡಯಲ್ ಮಾಡಿ ದೂರನ್ನು ಹೇಳಿಕೊಂಡಿರುವ ಘಟನೆ ನಡೆದಿದೆ.
ಅಭಯಮ್ ಅವರ ತಂಡದ ಮಧ್ಯಪ್ರವೇಶದ ನಂತರ ಪತ್ನಿ ಆಗಾಗ್ಗೆ ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸುವುದರಿಂದ ಪತ್ನಿಯನ್ನು ಮುಕ್ತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ನ(Gujarat) ಎಲ್ಲಾ ಮಹಿಳಾ ನಿವಾಸಿಗಳಿಗೆ ಸರ್ಕಾರ ಟೋಲ್-ಫ್ರೀ ಮಹಿಳಾ ಸಹಾಯವಾಣಿ ಸಂಖ್ಯೆ -181 ಅಭಯಂ ಯೋಜನೆ ರೂಪಿಸಿದ್ದು, ಈ ಬಗ್ಗೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ.89 ವರ್ಷದ ತನ್ನ ಪತಿ ಇಂಜಿನಿರ್ ಆಗಿದ್ದು, ವಡೋದರದ ಸಯಾಜಿಗಂಜ್ ಪ್ರದೇಶದಲ್ಲಿ (Sayajiganj area) ವಾಸಿಸುತ್ತಿದ್ದಾರೆ. ವಯಸ್ಸಾದರೂ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದನಂತೆ. ವಯಸ್ಸಿನಲ್ಲಿ ಯೋಗಾಭ್ಯಾಸ ಮಾಡುವಂತೆ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತೆ ವೃದ್ಧೆಯ ಪತಿಗೆ ತಿಳಿಸಲಾಗಿದೆ ಎನ್ನಲಾಗಿದೆ.