ಬೆಂಗಳೂರು ಗ್ರಾಮಾಂತರ: ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಇಂದು ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶವನ್ನು ಮಾಡುತ್ತಿದೆ. ಈ ನಡುವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ನಾವೇ ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಧಮ್ ಇದ್ರೆ ತಡೆಯಿರಿ ಅಂತ ಕಾಂಗ್ರೆಸ್ಗೆ ಸವಾಲ್ ಹಾಕಿದರು.
ನಿಮ್ಮಪ್ಪರಣೆ ಸಿಎಂ ಆಗೋಲ್ಲ ಅಂತ ಹೇಳಿದವರ ಜೊತೆಗೆ ನೀವು ಕೈ ಜೋಡಿಸಿದ್ದು ನೆನಪು ಮಾಡಿಕೊಳ್ಳಿ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಿಡಿಕಾರಿದರು.
ಇದೇ ವೇಳೆ ಅವರು ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಕರ್ನಾಟಕದ ತುಂಬೆಲ್ಲ ಮಾಡುತ್ತೇವೆ ತಾಕತ್ತು ಇದ್ದರೇ ಧಮ್ ಇದ್ರೆ ತಡೆಯಿರಿ ಅಂತ ಕಾಂಗ್ರೆಸ್ಗೆ ಸವಾಲು ಹಾಕಿದರು. ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾವು ಶ್ರಮಿಸುತ್ತೇವೆ ಅಂತ ಹೇಳಿದರು.
ಇದೇ ವೇಳೆ ಅವರು ನಾವು ಜಾತಿ, ಧರ್ಮಗಳನ್ನು ನೋಡದೇ ಎಲ್ಲರ ಮಕ್ಕಳಿಗೂ ರೈತ ವಿದ್ಯಾ ನಿಧಿಯೋಜನೆಯನ್ನು ವಿಸ್ತರಿಸಿದ್ದೇವೆ. 21ನೇ ಶತಮಾನ ಜ್ಞಾನದ ಶತಮಾನ. ನಮ್ಮ ಕರ್ನಾಟಕದ ಮಕ್ಕಳು ಇತರರಿಗೂ ಪೈಪೋಟಿ ನೀಡುವಂತಹ ವಾತಾವರಣ ಕಲ್ಪಿಸುತ್ತಿದ್ದೇವೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ಮೆಟ್ರೋ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಉಪನಗರ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕನ್ನಡ ರಾಜ್ಯೋತ್ಸವದಂದು ವಿಶ್ವಾದ್ಯಂತ ಏಕಕಾಲಕ್ಕೆ 3 ಲಕ್ಷ ಕಂಠಗಳಲ್ಲಿ ನಾಡಗೀತೆ ಮೊಳಗಿದೆ ಅಂತ ತಿಳಿಸಿದರು. ಕನ್ನಡದ ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ಅನೇಕ ಕನ್ನಡಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆ ಹಾಗೂ ಇತರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಂದಾಯ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿದೆ
ಸರ್ಕಾರದ ಎಲ್ಲಾ ಇಲಾಖೆಗಳ ನಾಗರೀಕ ಸೇವೆಗಳನ್ನು ಸಾರ್ವಜನಿಕರಿಗೆ ಅವರ ಗ್ರಾಮದಲ್ಲಿಯೇ ಒದಗಿಸುವ ಅಂಗವಾಗಿ “ಗ್ರಾಮ ಓನ್” ಯೋಜನೆ ಜಾರಿಗೆ ತರಲಾಗಿದೆ ಅಧಿಕಾರದ ಆಸೆಗಾಗಿ, ಬಹುಮತವಿಲ್ಲದಿದ್ದರೂ ಜೆಡಿಎಸ್ ಜೊತೆ ಕೈ ಜೋಡಿಸಿದ ಸಿದ್ದರಾಮಯ್ಯನವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ..? ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು. ಆದರೇ ಕರ್ನಾಟಕದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಆಗಿನ ಮುಖ್ಯಮಂತ್ರಿ ಯಡಿಯ್ಯೂರಪ್ಪ ಅವರು ಸಮರ್ಥವಾಗಿ ನಿಭಾಯಿಸಿದ್ದರು. ನ್ನಭಾಗ್ಯದ ಅವ್ಯವಹಾರ ತನಿಖೆ ನಡೆಸುತ್ತಿದ್ದ ಅನುರಾಗ್ ತಿವಾರಿ ಉತ್ತರ ಪ್ರದೇಶದಲ್ಲಿ ಅನುಮಾನಸ್ಪದವಾಗಿ ಸಾವೀಗಿಡಾದರು. ಇದು ಸಿದ್ದರಾಮಯ್ಯನವರ ಆಡಳಿತದ ಪಾರದರ್ಶಕತೆ. ಅನ್ನಭಾಗ್ಯಕ್ಕೂ ಕನ್ನ ಹಾಕಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಅಂತ ತಿಳಿಸಿದರು.
ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ನಗರಗಳನ್ನು ಸ್ಯಾಟಲೈಟ್ ಟೌನ್ ಗಳಾಗಿ ಅಭಿವೃದ್ಧಿಪಡಿಸಲಾಗುವುದು ಅಂತ ತಿಳಿಸಿದರು.ಸಮಾಜದ ಎಲ್ಲಾ ವರ್ಗಗಳಿಗೂ ಅವಕಾಶ ನೀಡುವ ಮೂಲಕ ಎಲ್ಲರೂ ಅಭಿವೃದ್ಧಿಯಾಗ ಬೇಕೆಂಬುದೇ ನಮ್ಮ ಸರ್ಕಾರದ ಆಶಯವಾಗಿದೆ. ರೈತರ ವ್ಯವಸಾಯಕ್ಕೆ ಅನುಕೂಲವಾಗಲು, ಹಾಗೂ ವೆಚ್ಚ ಕಡಿತವಾಗಲು “ರೈತ ಶಕ್ತಿ”ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಅಂತ ತಿಳಿಸಿದರು.
Live : 'ಜನಸ್ಪಂದನ – ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ' – ದೊಡ್ಡಬಳ್ಳಾಪುರ #JanaSpandana https://t.co/LqNTw69evs
— BJP Karnataka (@BJP4Karnataka) September 10, 2022