ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಟರ್ ಮೆನ್, ಪಂಪ್ ಆಪರೇಟರ್, ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾದ್ರೇ ಅವರ ಕರ್ತವ್ಯಗಳು ಏನು ಎಂಬುದಾಗಿ ಮುಂದೆ ಓದಿ.
1) ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಕೆಲಸ ನಿರ್ವಹಿಸಲು ಹಾಗೂ ನೀರಿನ ಟ್ಯಾಂಕ್ ಭರ್ತಿಯಾದ ನಂತರ ನೀರು ಸರಬರಾಜನ್ನು ನಿಲ್ಲಿಸತಕ್ಕದ್ದು.
2) ನೀರಿನ ಮೇಲೆ ತೆರಿಗೆ ವಸೂಲಿ ಮಾಡತಕ್ಕದ್ದು ಹಾಗೂ ಬಿಲ್ ಕಲೆಕ್ಟಗೆ ತೆರಿಗೆ ವಸೂಲಾತಿ ವಿಷಯದಲ್ಲಿ ಸಹಕಾರ ನೀಡುವುದು.
3) ಕುಡಿಯುವ ನೀರು ಸರಬರಾಜು ಸ್ಥಾವರಗಳು ಮತ್ತು ಕೈಪಂಪು ಕೊಳವೆ ಬಾವಿಗಳ ಸಂರಕ್ಷಣೆ ಮತ್ತು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವಿಕೆ.
4) ಪಂಪ್ ಹೌಸ್‌ನ ಮೀಟರ್ ರೀಡಿಂಗ್ ಪ್ರಗತಿ ನಿರ್ವಹಣೆಯನ್ನು ಪ್ರತಿ ಮಾಹೆ ರೀಡಿಂಗ್ ಲೆಡ್ಡಿರ್‌ನಲ್ಲಿ ನಮೂದಿಸತಕ್ಕದ್ದು ಹಾಗೂ ಸಣ್ಣಪುಟ್ಟ ದುರಸ್ತಿಗಳನ್ನು ಸ್ವತಃ ನಿರ್ವಹಿಸತಕ್ಕದ್ದು.
5) ಗ್ರಾಮಗಳ ಬೀದಿ ದೀಪಗಳ ದುರಸ್ತಿ ಸಮಯದಲ್ಲಿ ಸಹಕಾರ ನೀಡತಕ್ಕದ್ದು.
6) ಬೆಳಿಗ್ಗೆ ಮತ್ತು ಸಂಜೆ ಗ್ರಾಮಗಳ ಬೀದಿ ದೀಪಗಳನ್ನು ಸ್ವಿಚ್ ಆನ್ ಮತ್ತು ಸ್ವಿಚ್ ಆಫ್ ಮಾಡತಕ್ಕದ್ದು.
7) ಪಂಪು ಮೋಟಾರ್‌ಗಳು, ಕೃಪ ಕೊಳವೆ ಬಾವಿಗಳು ಮತ್ತು ಪೈಪ್‌ಲೈನ್ ದುರಸ್ತಿ ಸಮಯದಲ್ಲಿ ಯಿದ್ದು ನಿರ್ವಹಿಸತಕ್ಕದ್ದು.
8) ಗ್ರಾಮ ನೈರ್ಮಲ್ಯ, ಚರಂಡಿ ಸ್ವಚ್ಛತೆಗಾಗಿ ಬೀಚಿಂಗ್ ಮತ್ತು ಫೆನಾಯಿಲ್ ಸಿಂಪಡಿಸತಕ್ಕದ್ದು.
9) ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ಗೋ ನೀರಿನ ಕಟ್ಟೆಗಳಿಗೆ ನೀರು ಭರ್ತಿ ಮಾಡುವ ಬಗ್ಗೆ ಕ್ರಮ ವಹಿಸತಕ್ಕದ್ದು.
10) ಸಾರ್ವಜನಿಕ ನಳಗಳಲ್ಲಿ ನೀರು ಪೋಲಾಗುವುದನ್ನು ತಡೆಗಟ್ಟುವುದು ಹಾಗೂ ಈ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡತಕ್ಕದ್ದು, ಮತ್ತು ಗೃಹ ಬಳಕೆಯಲ್ಲಿಯೂ ಅನಾವಶ್ಯಕವಾಗಿ ನೀರು ಸೋಲಾಗುವುದನ್ನು ತಡೆಗಟ್ಟಲು ತಿಳುವಳಿಕೆ ನೀಡತಕ್ಕದ್ದು.
11) ಗ್ರಾಮ ಪಂಚಾಯತಿ ಅಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು (ಗ್ರೇಡ್-1 ಮತ್ತು ಗ್ರೇಡ್-2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ವಹಿಸುವ ಗ್ರಾಮ ಪಂಚಾಯತಿಯ ಕಾರ್ಯಗಳನ್ನು ನಿರ್ವಹಿಸತಕ್ಕದ್ದು.
ಜವಾನ | ಆಟೆಂಡರ್‌ನ ಕರ್ತವ್ಯಗಳು
1) ಗ್ರಾಮ ಪಂಚಾಯತಿ ಕಛೇರಿಯ ರವಾನೆಗಳನ್ನು ಸಂಬಂಧಿಸಿದವರಿಗೆ ತಲುಪಿಸುವುದು
2) ಸಾಮಾನ್ಯ ಸಭೆ, ವಿಶೇಷ ಸಭೆ, ಗ್ರಾಮ ಸಭೆ, ವಾರ್ಡ್ ಸಭೆ, ಜನವಸತಿ ಸಭೆ ಮತ್ತು ಇನ್ನಿತರೆ ಸಭೆಗಳ ನೋಟೀಸುಗಳನ್ನು, ಕರಪತ್ರಗಳನ್ನು ಸಂಬಂಧಿಸಿದವರಿಗೆ ವಿತರಿಸುವುದು.
3) ಕಛೇರಿಯ ಸ್ವಚ್ಛತೆ ನಿರ್ವಹಣೆ ಮಾಡುವುದು
4) ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಓ, ಕಾರ್ಯದರ್ಶಿ ಮತ್ತು ಎಸ್ ಡಿ ಎ, ಲೆಕ್ಕ ಸಹಾಯಕರು ವಹಿಸುವ ಗ್ರಾಮ ಪಂಚಾಯ್ತಿ ಕಾರ್ಯಗಳನ್ನು ಮಾಡುವುದು.
ಜನಪ್ರತಿನಿಧಿ ಅಂದ್ರೆ ಹೀಗಿರಬೇಕು! 6 ವಿದ್ಯಾರ್ಥಿಗಳಿಗೆ ‘MBBS ಶಿಕ್ಷಣ’ಕ್ಕೆ ನೆರವಾದ ‘ಸಚಿವ ಎಂ.ಬಿ ಪಾಟೀಲ್’
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








