ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ನಡೆದ ಬಿರ್ಸಾ ಮುಂಡಾ ಜಯಂತಿಯಂದು ಸಿಎಂ ಮಮತಾ ಬ್ಯಾನರ್ಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸಿಎಂ ಮಮತಾ ಬ್ಯಾನರ್ಜಿಯವರು ಅಲ್ಲಿದ್ದ ಕಲಾವಿದರ ಬಳಿ ತೆರಳಿ ಸಾಂಪ್ರದಾಯಿಕ ಡೋಲು ಭಾರಿಸಿದರು. ಬಳಿಕ ಕಲಾವಿದರ ಜೊತೆ ನೃತ್ಯ ಮಾಡಿದರು.
ನಂತರ ಮಾತನಾಡಿದ ಸಿಎಂ ಮಮತಾ, ಕೇಂದ್ರದ ಮೋದಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. ಅಭಿವೃದ್ಧಿ ನಿಧಿ ಪಡೆಯಲು ಪ್ರಧಾನಿ ಮೋದಿಯವರ ಕಾಲಿಗೆ ಬಿದ್ದು ಭಿಕ್ಷೆ ಬೇಡಬೇಕಾ ಎಂದು ಮಮತಾ ಗುಡುಗಿದರು.
#WATCH | West Bengal CM Mamata Banerjee tries her hand on drums and joins artists performing traditional dance in Jhargram pic.twitter.com/j8MeN5X8zq
— ANI (@ANI) November 15, 2022
ಮಮತಾ ಬ್ಯಾನರ್ಜಿ ಅವರು ಎಂಜಿಎನ್ಆರ್ಇಜಿಎ ಹಣವನ್ನು ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ತನ್ನ ಹಣ ಕೊಡಲಿ, ಇಲ್ಲವೇ ಸರ್ಕಾರ ತೊರೆಯಲಿ ಎಂದರು.
ಕಾರ್ಯಕ್ರಮದಲ್ಲಿ ಸಿಎಂ ಮಮತಾ ಮಾತನಾಡಿ, ಆದಿವಾಸಿಗಳ ಭೂಮಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೆವು. ನಾವು ಇದನ್ನು ಆಗಲು ಸಹ ಬಿಡಲಿಲ್ಲ. ಬಂಗಾಳ ಸರ್ಕಾರಕ್ಕೆ ಅಭಿವೃದ್ಧಿಗೆ ಹಣ ನೀಡಬಾರದು ಎಂದು ಕೆಲವರು ದೆಹಲಿಗೆ (ಕೇಂದ್ರ ಸರ್ಕಾರ) ಪತ್ರ ಬರೆದಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕೇಂದ್ರ ಸರ್ಕಾರದ ದುಷ್ಕೃತ್ಯಗಳನ್ನು ಡೋಲು, ಬಾಣ, ಬಿಲ್ಲುಗಳ ಮೂಲಕ ವಿರೋಧಿಸಿಬೇಕು ಎಂದೇಳಿದ್ದಾರೆ.
ಕೆಲವು ವರ್ಷಗಳ ಹಿಂದೆಯೇ ನಿಧಿ ಬಿಡುಗಡೆ ಮಾಡುವಂತೆ ಪ್ರಧಾನಿ ಮೋದಿಯವರನ್ನು ಕೇಳಿದ್ದೆ, ಅವರ ಕಾಲು ಹಿಡಿದು ಭಿಕ್ಷೆ ಬೇಡಬೇಕೇ? ನಮಗೆ ಹಣ ಕೊಡಿ ಇಲ್ಲವೇ ಸರ್ಕಾರ ಬಿಡಿ. ನೀವು ನಮಗೆ ಹಣ ನೀಡದಿದ್ದರೆ ಜನರು ನಿಮಗೆ ಜಿಎಸ್ಟಿ ಏಕೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.