ಬೆಂಗಳೂರು: ಕಲಾಪದಲ್ಲಿ ಪಿಎಸ್ ಐ ಅಕ್ರಮ ನೇಮಕಾತಿಯ ಚರ್ಚೆಗೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ಹಾಗೂ ವಾಕ್ಸಮರ ನಡೆದಿತ್ತು. ಹೀಗಾಗಿ ಇದರಿಂದ ಸಿಟ್ಟಾದ ಸಚಿವ ಮಾಧುಸ್ವಾಮಿ, ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ ಎಂದು ಗರಂ ಆಗಿದ್ದರು.
ಕಾಲೇಜಿಗೆ ಚಕ್ಕರ್, ಅಂತರಗಂಗೆ ತಪ್ಪಲಿಗೆ ಹಾಜರ್ : ಪೊದೆ ಸೇರುತ್ತಿರುವ ಕೋಲಾರದ ವಿದ್ಯಾರ್ಥಿಗಳು
ಇತ್ತೀಚೆಗೆ ನಡೆದ ಘಟನೆ ಬಗ್ಗೆ ಚರ್ಚೆ ಮಾಡಬೇಕು ಅಂತ ನಿಯಮ ಹೇಳುತ್ತೆ. ಪಿಎಸ್ಐ ಪ್ರಕರಣ ನಡೆದು ಏಳು ತಿಂಗಳಾಗಿದೆ. ಈ ವಿಷಯದ ಚರ್ಚೆಗೆ ನನ್ನ ತಕರಾರಿದೆ ಅಂತ ಮಧುಸ್ವಾಮಿ ಹೇಳಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿರುದ್ಧ ಸಚಿವರು ಸಿಟ್ಟಾದರು. ನಮಗೆ ಮಾತಾಡಲು ಬಿಡಿ, ಸರ್ಕಾರ ನಡೆಸ್ತಿರೋರು ನಾವು. ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ ಅಂತ ಗರಂ ಆದರು. ಆಗ ಕಾಂಗ್ರೆಸ್ ಸದಸ್ಯರು, ಕತ್ತೆ ಕಾಯೋಕೇ ಇರೋದು ಇನ್ನೇನಕ್ಕೆ ಇದ್ದೀರಿ ಅಂತ ಮಾಧುಸ್ವಾಮಿಗೆ ತಿರುಗೇಟು ಕೊಟ್ಟರು. ಪರಿಣಾಮ ಸದನದಲ್ಲಿ ಮತ್ತೆ ಕೋಲಾಹಲ ಎದ್ದಿದೆ.