ರಾಮನಗರ : ಕರ್ನಾಟಕದಲ್ಲಿ ಬೆಂಗಳೂರು -ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿಯ ವೈಮಾನಿಕ ಸಮೀಕ್ಷೆ ನಡೆಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.
BIGG NEWS: ದಶಪಥ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ನಿಲುಗಡೆಯಾಗಬೇಕು : ಮಾಜಿ ಸಚಿವ ಸಿ.ಪಿ. ಯೋಗೇಶ್ವರ್
ಸುದ್ದಿಗಾರರೊಂದಿಗೆ ಕೆಂಪೇಗೌಡನ ದೊಡ್ಡಿಯಲ್ಲಿ ಮಾತನಾಡಿದ ಅವರು, ದಶಪಥ ಹೆದ್ದಾರಿ ಕಳಪೆ ಗುಣಮಟ್ಟದ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿವೆ. 3- 4 ಬಾರಿ ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಿ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಸಚಿವರಿಗೆ ಸರಿಯಾದ ಮಾಹಿತಿ ಪಡೆದಿದ್ದಾರೆ.
BIGG NEWS: ದಶಪಥ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ನಿಲುಗಡೆಯಾಗಬೇಕು : ಮಾಜಿ ಸಚಿವ ಸಿ.ಪಿ. ಯೋಗೇಶ್ವರ್
ಈಗ ಜಿಲ್ಲೆ, ತಾಲೂಕು ಸಂಪರ್ಕ ಮಾಡಲು ಅನುಮತಿ ಕೊಟ್ಟಿದ್ದಾರೆ. ದಶಪಥ ಹೆದ್ದಾರಿಯಲ್ಲಿ ಕೆಲವೆಡೆ ಕಳಪೆ ಇರುವುದು ಎದ್ದುಕಾಣುತ್ತಿವೆ. ಅಂಡರ್ ಬ್ರಿಡ್ಜ್ ನಿಂದ ಹಳ್ಳಿ ಜನರಿಗೆ ತೊಂದರೆ ಯಾಗುವುದನ್ನ ಸರಿಪಡಿಸುವ ಒತ್ತಾಯ ನಮ್ಮದು.
ಆ್ಯಕ್ಸಿಡೆಂಟ್ ಆಗಿರುವ ಬಗ್ಗೆ ಅಧಿಕಾರಿಗಳು ಗಮನಕ್ಕೆ ತರಬೇಕು. ನಾವು ರಾಜಕಾರಣಿಗಳು, ನಾವು ಹೇಳಿದ್ರೆ ರಾಜಕಾರಣ ಮಾಡುತ್ತೇವೆ ಅನ್ನುತ್ತಾರೆ. ಇಂದು ಕೇಂದ್ರ ಸಚಿವರು ಬರುತ್ತಾರೆ. ಅವರ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.