ಬೆಂಗಳೂರು : ಹಿಜಾಬ್ ವಿವಾದದ ಕುರಿತು ನ್ಯಾಯಮೂರ್ತಿಗಳ ವಿಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ (Supreme Court) ಹಿಜಾಬ್ ವಿವಾದವನ್ನು ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
BREAKING NEWS : ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಯಮ ಯಥಾಸ್ಥಿತಿ : ಶಿಕ್ಷಣ ಸಚಿವ .ಬಿ.ಸಿ.ನಾಗೇಶ್
ಸುಪ್ರೀಂಕೋರ್ಟ್ ವಿಭಜಿತ ತೀರ್ಪು ನೀಡಿದೆ. ಹೀಗಾಗಿ ವಿಚಾರಣೆ ಮುಂದುವರಿಯಬಹುದು. ಮುಂದಿನ ದಿನಗಳಲ್ಲಿಯೂ ಸುಪ್ರೀಂಕೋರ್ಟ್ ಯಾವುದೇ ರೀತಿ ತೀರ್ಪು ನೀಡಿದರೂ ನಾವು ಗೌರವಿಸುತ್ತೇವೆ’ ಎಂದು ಹೇಳಿದ್ದಾರೆ.
BREAKING NEWS : ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಯಮ ಯಥಾಸ್ಥಿತಿ : ಶಿಕ್ಷಣ ಸಚಿವ .ಬಿ.ಸಿ.ನಾಗೇಶ್
‘ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ಗೆ ವ್ಯವಸ್ಥೆ ಮಾಡಿಕೊಂಡಿದ್ದೆವು. ಮುಂದಿನ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿ ಯಾವುದೇ ನಿರ್ಧಾರ ತೆಗೆದುಕೊಂಡು, ವಿಸ್ತೃತ ಪೀಠ ನೀಡುವ ಯಾವುದೇ ತೀರ್ಪಿಗೆ ರಾಜ್ಯ ಸರ್ಕಾರ ಬದ್ಧವಾಗಿರುತ್ತದೆ’ ಎಂದರು.
ಚಾಮರಾಜಪೇಟೆ ಈದ್ಗಾ ಮೈದಾನ ಪ್ರಕರಣವನ್ನೂ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಈ ಪ್ರಕರಣವನ್ನು ಸಹ ಗಮನಿಸುತ್ತಿದ್ದೇವೆ. ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಏನೇ ತೀರ್ಪು ಬಂದರೂ ಮಾನ್ಯ ಮಾಡುತ್ತೇವೆ ಎಂದರು.