ನವದೆಹಲಿ : ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ FICCI ಕಾರ್ಯಕ್ರಮವೊಂದರಲ್ಲಿ ಚೀನಾವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾವನ್ನ ಗುರಿಯಾಗಿಸಿಕೊಂಡು, ನಾವು ಭಾರತದ ಸೂಪರ್ ಪವರ್ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗಂತ, ನಾವು ಬೇರೆ ಯಾವುದೇ ದೇಶದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತೇವೆ ಎಂದು ಎಂದಿಗೂ ಅರ್ಥವಲ್ಲ ಎಂದು ಹೇಳಿದರು. ಜಗತ್ತಿನ ಯಾವುದೇ ದೇಶದಿಂದ ಒಂದು ಇಂಚು ಭೂಮಿಯನ್ನ ವಶಪಡಿಸಿಕೊಳ್ಳುವ ಯಾವುದೇ ಉದ್ದೇಶ ನಮಗಿಲ್ಲ ಎಂದರು. ಇನ್ನು ಲೋಕಕಲ್ಯಾಣಕ್ಕಾಗಿ ನಾವು ಸೂಪರ್ ಪವರ್ ಆಗಲು ಬಯಸುತ್ತೇವೆ ಎಂದು ಹೇಳಿದರು. ಇನ್ನವ್ರು FICCIಯ 95ನೇ ವಾರ್ಷಿಕ ಸಮಾವೇಶವನ್ನ ಉದ್ದೇಶಿಸಿ ಮಾತನಾಡುತ್ತಿದ್ದರು.
ನಾವು ಭಾರತದ ಸಂಸ್ಕೃತಿಯನ್ನ ನಂಬುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. “ಇಡೀ ವಿಶ್ವದ ಒಗ್ಗಟ್ಟಿಗಾಗಿ ಭಾರತವು ವಸುಧೈವ ಕುಟುಂಬಕಂ ಎಂಬ ಸಂದೇಶವನ್ನ ನೀಡಿದೆ. 2013ರವರೆಗೆ ಇದ್ದ ಕತ್ತಲೆಯನ್ನ ಭಾರತ ಸಂಪೂರ್ಣವಾಗಿ ನೀಗಿಸಿ ವಿಶ್ವಕ್ಕೆ ಭರವಸೆಯ ಕಿರಣವಾಗಿ ಹೊರಹೊಮ್ಮಿದೆ” ಎಂದರು. ಇನ್ನು ಭಾರತ-ಚೀನಾ ಆರ್ಥಿಕತೆಯನ್ನ ಉಲ್ಲೇಖಿಸಿದ ರಕ್ಷಣಾ ಸಚಿವರು, 1949ರಲ್ಲಿ ಚೀನಾದಲ್ಲಿ ಚಳುವಳಿ ನಡೆದಾಗ, ಅವ್ರ ಜಿಡಿಪಿ ಭಾರತಕ್ಕಿಂತ ಕಡಿಮೆ ಇತ್ತು. 1980ರವರೆಗೂ ಭಾರತ ಮತ್ತು ಚೀನಾ ಒಟ್ಟಿಗೆ ನಡೆಯುತ್ತಿದ್ದವು” ಎಂದರು.
ಭಾರತ ಈಗ ಮೂರೂವರೆ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ.!
80ರ ದಶಕದ ನಂತ್ರ ಆರ್ಥಿಕತೆಯನ್ನ ಸುಧಾರಿಸಲು ಚೀನಾ ಅನೇಕ ಆರ್ಥಿಕ ಸುಧಾರಣೆಗಳನ್ನು ಮಾಡಿತು ಮತ್ತು ದೀರ್ಘ ಜಿಗಿತವನ್ನ ತೆಗೆದುಕೊಂಡಿತು. ನಂತ್ರ ಅದು ಆರ್ಥಿಕ ಸುಧಾರಣೆಗಳ ವಿಷಯದಲ್ಲಿ ಎಲ್ಲಾ ದೇಶಗಳನ್ನ ಹಿಂದೆ ಬಿಟ್ಟಿತು. 21ನೇ ಶತಮಾನದಲ್ಲಿ ಭಾರತವು ವಿಶ್ವದ ಅಗ್ರ 10 ಆರ್ಥಿಕತೆಗೆ ಮರಳುತ್ತದೆ ಮತ್ತು ಬೆಳವಣಿಗೆಯ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಆದ್ರೆ, 80ರ ದಶಕದಲ್ಲಿ ಭಾರತದಲ್ಲಿ ಆರ್ಥಿಕತೆ ಚಾಲನೆಯಲ್ಲಿದ್ದ ವೇಗವು ಸಾಕಾಗಲಿಲ್ಲ. ಮೋದಿ ಸರ್ಕಾರದ ಎಂಟೂವರೆ ವರ್ಷಗಳ ಅವಧಿಯಲ್ಲಿ ಭಾರತವು 3.5 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳಿದರು.
ಭಾರತವು ಫ್ರಾಗೈಲ್ 5 ರಿಂದ ಫ್ಯಾಬುಲಸ್ 5ಕ್ಕೆ ಚಲಿಸುತ್ತದೆ
ರಕ್ಷಣಾ ಸಚಿವರು FICCIಯ ಕಾರ್ಯಕ್ರಮದಲ್ಲಿ, ನಮ್ಮ ಭಾರತವು ದುರ್ಬಲ 5ರ ವರ್ಗದಿಂದ ಫ್ಯಾಬುಲಸ್ 5ಗೆ ಸ್ಥಳಾಂತರಗೊಂಡಿದೆ, ಇದು ಕಳೆದ 8 ಮತ್ತು ಒಂದೂವರೆ ವರ್ಷಗಳಲ್ಲಿ ಸಂಭವಿಸಿದೆ. ಮೋದಿಜಿ ಪ್ರಧಾನಿಯಾದಾಗ ಭಾರತವು ವಿಶ್ವದ 9ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು ಮತ್ತು ನಮ್ಮ ಆರ್ಥಿಕತೆಯ ಗಾತ್ರವು ಸುಮಾರು ಎರಡು ಟ್ರಿಲಿಯನ್ ಡಾಲರ್ಗಳಷ್ಟಿತ್ತು ಎಂದು ಅವರು ಹೇಳಿದರು.