Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕ್ರಿಕೆಟ್ ಮೈದಾನದಲ್ಲಿ ಹೈಡ್ರಾಮಾ: ಪಂದ್ಯದ ಮಧ್ಯೆ ಮಾತಿನ ಚಕಮಕಿ; ಟ್ರಾವಿಸ್ ಹೆಡ್‌ಗೆ ಹ್ಯಾಂಡ್‌ಶೇಕ್ ನಿರಾಕರಿಸಿ ಮುನಿಸು ತೋರಿದ ವಿರಾಟ್ ಕೊಹ್ಲಿ!

ರಾಜ್ಯದ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ : ಹಾಸ್ಟೆಲ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಟ್ವಿಶಾ ಶರ್ಮಾ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್! ಸಾವಿಗೂ ಕೆಲ ಗಂಟೆ ಮುನ್ನ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ಮಾಡೆಲ್; ಸಿಸಿಟಿವಿಯಲ್ಲಿ ರಹಸ್ಯ ಬಯಲು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬದ್ಧತೆ, ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
KARNATAKA

ಬದ್ಧತೆ, ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಬದ್ಧತೆ, ಪಾರದರ್ಶಕತೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಎಂಬುದಾಗಿ ಹೇಳಿದ್ದಾರೆ.

ಇಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಅಭಯ ಹಸ್ತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯಲ್ಲಿ ಮೊದಲಿನಿಂದಲೂ ಮಾನವ ಸಂಪನ್ಮೂಲದ ಕೊರತೆ ಇತ್ತು. ಈಗ ವೈದ್ಯರು, ಟೆಕ್ನೀಶಿಯನ್, ಇತರರ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಇದಕ್ಕೆ ಅಗತ್ಯ ಇರುವ ಆರ್ಥಿಕ ಅನುದಾನ ನೀಡಿದ್ದಾರೆ. ಇಂದು ಒಂದು ಸಾವಿರಕ್ಕೂ ಅಧಿಕ ಜನರ ನೇಮಕಾತಿ ಪತ್ರ ನೀಡುತ್ತಿದ್ದೇವೆ. ಇವರೆಲ್ಲ ಸರ್ಕಾರಿ ಹುದ್ದೆಯ ಕನಸು ನನಸು ಮಾಡಿಕೊಂಡಿದ್ದಾರೆ. ಸರ್ಕಾರಿ ಸೇವೆ ಪುಣ್ಯದ ಕೆಲಸ. ನಮ್ಮ ಅಪೇಕ್ಷೆ ಇಷ್ಟೇ, ಪ್ರಾಮಾಣಿಕತೆ, ಬದ್ದತೆಯಿಂದ, ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಬಡಜನರ ಜೊತೆ ನಿಮ್ಮ ನಡವಳಿಕೆ ಬಹಳ ಮುಖ್ಯ. ಕೆಲವರು ಪ್ರಾರಂಭದಲ್ಲಿ ಆದರ್ಶವಾಗಿ ಕೆಲಸ ಮಾಡುತ್ತಾರೆ.
ಸ್ವಲ್ಪ ದಿನದ ನಂತರ ಆದರ್ಶ, ಬದ್ದತೆ ಮರೆಯುತ್ತಾರೆ. ಹಾಗಾಗಬಾರದು, ಆದರ್ಶ ನಮ್ಮ ಜೀವನ ಪರ್ಯಂತ ಇಟ್ಟುಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ 320 ಮತ್ತು ರಾಜ್ಯದ ಉಳಿದ ಭಾಗದ 650, ಒಟ್ಟು 970 ಅರ್ಹ ಅರೆ- ವೈದ್ಯಕೀಯ ಹುದ್ದೆಗಳಿಗೆ ಖಾಯಂ ನೇಮಕಾತಿ ಪತ್ರವನ್ನು ಇಂದು ನೀಡುತ್ತಿದ್ದೇವೆ. 77 ಡ್ರಗ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡುತ್ತಿದ್ದೇವೆ. ಇದು ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಅದನ್ನು ಸರಿಯಾದ ರೀತಿಯಲ್ಲಿ ವಾದ ಮಂಡಿಸಿ ಅಂತಿಮಗೊಳಿಸಿದ್ದೇವೆ. 223 ಡಿ ಫಾರ್ಮಾ ವಿದ್ಯಾರ್ಥಿಗಳನ್ನು ಅಪ್ರೆಂಟಿಸ್ ಆಗಿ ತೆಗೆದುಕೊಂಡಿದ್ದೇವೆ. ಇನ್ನೂ 700 ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗುವುದು. ಇದರಿಂದ ಅವರಿಗೆ ವೃತ್ತಿ ಅನುಭವದ ಜೊತೆಗೆ, ಪ್ರತಿ ತಿಂಗಳು 8000 ವೇತನ ಸಹ ನೀಡುತ್ತೇವೆ. ಇದು ದೇಶದಲ್ಲೇ ಮೊದಲು. ಒಂದೆರಡು ತಿಂಗಳಲ್ಲಿ ಸುಮಾರು 220 ತಜ್ಞ ವೈದ್ಯರ ನೇಮಕಾತಿ ಆಗಲಿದ್ದು, ಸರ್ಕಾರಿ ಅಸ್ಪತ್ರೆಯಲ್ಲಿಯೇ ಸುಪರ್ ಸ್ಪೆಷಾಲಿಟಿ ಚಿಕಿತ್ಸೆ ದೊರೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.

ದೊಡ್ಡ ಇಲಾಖೆಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇಮಕಾತಿಗಳಿಗೆ ಒಂದು ಪ್ರತ್ಯೇಕ ‘ನೇಮಕಾತಿ ಮಂಡಳಿ’ ರಚನೆ ಮಾಡಲು ಯೋಜಿಸಿದ್ದು, ಮುಖ್ಯಮಂತ್ರಿಗಳಿಗೆ ಈ ಕುರಿತು ವಿನಂತಿ ಮಾಡಲಾಗಿದೆ. ನಿವೃತ್ತರಾದ ತಕ್ಷಣ ನೇಮಕಾತಿ ಪ್ರಕ್ರಿಯೆ ನಡೆದರೆ, ಮಾನವ ಸಂಪನ್ಮೂಲದ ಕೊರತೆ ಉಂಟಾಗುವುದಿಲ್ಲ. ಇದರಿಂದ ಆರೋಗ್ಯ ಸೇವೆಗೆ ಮಾನವ ಸಂಪನ್ಮೂಲದ ಕೊರತೆ ತಡೆಯಲು ಸಹಾಯಕವಾಗಲಿದೆ. ಕಳೆದ ಬಾರಿ ಪಾರದರ್ಶಕ ರೀತಿಯಲ್ಲಿ ವರ್ಗಾವಣೆಯನ್ನು ಇಲಾಖೆ ಮಾಡಿದ್ದು, ಸಾವಿರಾರು ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಿದ್ದು, ಈ ವರ್ಷವೂ ಅದನ್ನು ಮುಂದುವರಿಸುತ್ತೇವೆ. ಮುಖ್ಯಮಂತ್ರಿಗಳು ಸಹ ಈ ಕಾರ್ಯಕ್ಕೆ ನಮಗೆ ಬೆನ್ನೆಲುಬಾಗಿ ನಿಂತಿದ್ದರಿಂದ ಈ ಎಲ್ಲ ಕಾರ್ಯ ಮಾಡಲು ಸಹಕಾರಿಯಾಗಿದೆ. 1400 MBBS ವೈದ್ಯರು ಕಡ್ಡಾಯ ಗ್ರಾಮೀಣ ಸೇವೆ ಅಡಿ ಇಲಾಖೆಯಲ್ಲಿ ಕೆಲಸ ಮಾಡು್ತಿದ್ದು, ಪಿಜಿ ಓದುತ್ತಿರುವವರಿಗೂ ಇದರಡಿ ಕಡ್ಡಾಯ ಸೇವೆ ಸಲ್ಲಿಸಬೇಕೇಂಬ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತಿದೆ ಎಂದರು.

ಪುನೀತ್ ರಾಜಕುಮಾರ್ ಹೃದಯ ಯೋಜನೆಯಡಿಯಲ್ಲಿ 13,000 ಜನರಿಗೆ ಚಿಕಿತ್ಸೆ ನೀಡಿ ಅವರ ಪ್ರಾಣ ಉಳಿಸಲಾಗಿದ್ದು, 20 ಸಾವಿರ ಮೌಲ್ಯದ ಹೃದಯ ಸಂಬಂಧಿ ಇಂಜೆಕ್ಷನ್ ಉಚಿತವಾಗಿ ನೀಡುವ ಕೆಲಸ ಆಗುತ್ತಿದೆ. ಸೌರ ಸ್ವಾಸ್ಥ್ಯ ಯೋಜನೆ 3600 ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಿದ್ದು ವಿದ್ಯುತ್ ಬಳಕೆಯಲ್ಲಿ ಗಮನಾರ್ಹ ಸ್ವಾವಲಂಬನೆ ಸಾಧಿಸಲಾಗಿದೆ. ಇದನ್ನು 5 ಸಾವಿರ ಕೇಂದ್ರಗಳಿಗೆ ವಿಸ್ತರಿಸಲಾಗುವುದು. ತಾಯಿ ಮರಣ ಪ್ರಮಾಣವನ್ನು ಧಾಖಲೆಯ ಮಟ್ಟದಲ್ಲಿ ಇಳಿಸಲಾಗಿದ್ದು, ಭ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ. ನೂತನ ಮಾದರಿ ಹಾಜರಾತಿ ವ್ಯವಸ್ಥೆ ಜಾರಿಗೆ ತಂದು ಸಿಬ್ಬಂದಿ ಸೇವೆ ಸರಿಯಾದ ರೀತಿಯಲ್ಲಿ ಜನರಿಗೆ ಸಿಗುವಂತೆ ಮಾಡಲಾಗಿದ್ದು, ಈವರೆಗೆ 30 ಸಾವಿರ ಆರೋಗ್ಯ ಇಲಾಖೆ ನೌಕರರು ನೋಂದಾಯಿಸಿಕೊಂಡಿದ್ದಾರೆ. ಹೀಗೆ ವ್ಯವಸ್ಥೆಯ ಸುಧಾರಣೆಗೆ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ಶಿವಮೊಗ್ಗ: ಶ್ರೀ ಮಾರಿಕಾಂಬ ದೇವಿ ಜಾತ್ರೆ ಪ್ರಯುಕ್ತ ಈ ವಾಹನ ಸಂಚಾರ ಮಾರ್ಗ/ನಿಲುಗಡೆ ಬದಲಾವಣೆ

BREAKING : ದೆಹಲಿಯಲ್ಲಿ ಉಗ್ರ ದಾಳಿಗೆ ‘LeT’ ಸಂಚು ; ಪಂಜಾಬ್-ಕಾಶ್ಮೀರದಲ್ಲಿ 2 ಐಇಡಿಗಳು ಪತ್ತೆ!

Share. Facebook Twitter LinkedIn WhatsApp Email

Related Posts

ರಾಜ್ಯದ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ : ಹಾಸ್ಟೆಲ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

1 Min Read

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `KPSC’ಯಿಂದ 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

2 Mins Read

ಹಸಿ ಮೀನು Vs ಒಣ ಮೀನು: ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

2 Mins Read
Recent News

ಕ್ರಿಕೆಟ್ ಮೈದಾನದಲ್ಲಿ ಹೈಡ್ರಾಮಾ: ಪಂದ್ಯದ ಮಧ್ಯೆ ಮಾತಿನ ಚಕಮಕಿ; ಟ್ರಾವಿಸ್ ಹೆಡ್‌ಗೆ ಹ್ಯಾಂಡ್‌ಶೇಕ್ ನಿರಾಕರಿಸಿ ಮುನಿಸು ತೋರಿದ ವಿರಾಟ್ ಕೊಹ್ಲಿ!

ರಾಜ್ಯದ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ : ಹಾಸ್ಟೆಲ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಟ್ವಿಶಾ ಶರ್ಮಾ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್! ಸಾವಿಗೂ ಕೆಲ ಗಂಟೆ ಮುನ್ನ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ಮಾಡೆಲ್; ಸಿಸಿಟಿವಿಯಲ್ಲಿ ರಹಸ್ಯ ಬಯಲು!

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `KPSC’ಯಿಂದ 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

State News
KARNATAKA

ರಾಜ್ಯದ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ : ಹಾಸ್ಟೆಲ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026-27ನೇ ಸಾಲಿನ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.…

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `KPSC’ಯಿಂದ 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಹಸಿ ಮೀನು Vs ಒಣ ಮೀನು: ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.