ಮಂಡ್ಯ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ( Karnataka Assembly Election 2023 ) ಯಾವಾಗದರೂ ಬರಲೀ, ನಾವು ರೆಡಿ. ಅದು ಮುಂಚೆ ಬಂದರೂ ಸರಿಯೇ, ನಿಗದಿತ ಸಮಯಕ್ಕೆ ಬಂದರೂ ಸರಿಯೇ ನಾವು ಸಿದ್ಧರಿದ್ದೇವೆ. ಚುನಾವಣೆ ಎದುರಿಸಲು ನಾವು ರೆಡಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ತಿಳಿಸಿದ್ದಾರೆ.
ನಗರದಲ್ಲಿ ಇಂದು ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆಯ ಚರ್ಚೆ ವಿಚಾರವಾಗಿ ಮಾತನಾಡಿದಂತ ಅವರು, ನಾವು ಅವಧಿ ಪೂರ್ವಕ್ಕೂ ರೆಡಿ, ಅವಧಿ ಸಮಯಕ್ಕೂ ರೆಡಿಯಾಗಿದ್ದೇವೆ. ಚುನಾವಣೆಯಾಗ ಬಂದ್ರು ಚುನಾವಣೆ ಎದುರಿಸಲು ನಾವು ಸಿದ್ದರಿದ್ದೇವೆ ಎಂಬುದಾಗಿ ಹೇಳಿದರು.
ಇನ್ನೂ ಕುಮಾರಸ್ವಾಮಿಗೆ ವಿವಿಧ ಬಗೆಯ ಹಾರ ಹಾಕುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಾ ಕಡೆ ನನಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಹೋದಲ್ಲಿ ಎಲ್ಲಾ ವಿಶೇಷ ಹಾರಗಳನ್ನು ಹಾಕುತ್ತಿದ್ದಾರೆ. ಈ ಹಾರಗಳು ಗಿನ್ನಿಸ್ ರೆಕಾರ್ಡ್ಗೆ ಹೋಗಬಹುದು. ಕ್ರೇನ್ ಮೂಲಕ ಹಾರವನ್ನು ಸ್ವಯಂ ಪ್ರೇರಣೆಯಿಂದ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಎದ್ದಿರುವ ಈ ಹಾರದ ಕ್ರೇಜ್, ಗಿನ್ನಿಸ್ ರೆಕಾರ್ಡ್ ಸೇರುತ್ತದೆ ಎಂದರು.
ಕೆಂಪಣ್ಣ ಬಂಧನ ಬಿಡುಗಡೆ ವಿಚಾರ ಕೇಳಿದ ಪ್ರಶ್ನೆಗೆ ಉತ್ತರಿಸಿದಂತ ಅವರು, ಕೆಂಪಣ್ಣ ಅವರು ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ರು. ಕೆಲವು ದಾಖಲೆಗಳನ್ನು ಜನತೆಯ ಮುಂದೆ ಇಡಬೇಕು. ಮಂತ್ರಿಯೊಬ್ಬರು ಮಾನನಷ್ಟ ಮೊಕದ್ದಮೆ ಹೂಡಿದ್ರು. ಹೀಗಾಗಿ ಅವರ ಬಂಧನ ಬಿಡುಗಡೆಯಾಗಿದೆ. ಅವರ ಬಳಿ ದಾಖಲೆಗಳು ಇದ್ರೆ ಬಿಟ್ಟು, ರಾಜ್ಯದ ಜನತೆ ಮುಂತೆ ಸತ್ಯಾಂಶ ಇಡಬೇಕು ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ನೂತನ ಪಕ್ಷ ಘೋಷಣೆ ಮಾಡಿದ ವಿಚಾರವಾಗಿ ಮಾತನಾಡಿ, ಅವರು ಹೊಸ ಪಕ್ಷ ಘೋಷಣೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಬೇರೆ ಪಕ್ಷ ಮಾಡಬಹುದು ಎಂದು ಎಲ್ಲರೂ ನಿರೀಕ್ಷೆ ಇಟ್ಟಿದ್ದರು. ಅವರು ಬೇರೆ ಪಕ್ಷ ಮಾಡುವ ಬೆಳವಣಿಗೆ ಏನ್ ಆಗುತ್ತೆ ಎನ್ನುವುದನ್ನು ನೋಡೋಣ ಎಂದು ಹೇಳಿದರು.
BIGG NEWS : ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ : ಶಾಸಕ ಸಿ.ಟಿ. ರವಿ ಹೇಳಿದ್ದೇನು ಗೊತ್ತಾ?
BREAKING NEWS : ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು
KL Rahul: ಶ್ರೀಲಂಕಾ ವಿರುದ್ಧದ ತವರಿನ ಟಿ20 ಸರಣಿಗೆ ಕೆಎಲ್ ರಾಹುಲ್ ಕೈತಪ್ಪುವ ಸಾಧ್ಯತೆ – ವರದಿ
ತನ್ನ ಪ್ರಾಣ ಸ್ನೇಹಿತ ಹೊಸ ಪಕ್ಷ ರಚನೆ ಬಗ್ಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದೇನು ಗೊತ್ತಾ?