ಬೆಳಗಾವಿ: ಅಧಿವೇಶನ ಮುಗಿಯುವ ವೇಳೆಗೆ ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ ತೆರಳಲಿದ್ದಾರೆ. ನಾವು ಸಿಎಂ ಸಂಪುಟಕ್ಕೆ ಸೇರ್ಪಡೆಯಾಗುವುದು ಗ್ಯಾರಂಟಿ. ಬಸವರಾಜ ಬೊಮ್ಮಾಯಿ ಕೂಡ ನಮಗೆ ಭರವಸೆ ನೀಡಿದ್ದಾರೆ. ಬೇರೆಯವರು ಸೇರುವ ಬಗ್ಗೆ ಮನಗೆ ಗೊತ್ತಿಲ್ಲ ಎಂಬುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸದ ಬಳಿಕ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಭೇಟಿಯಾದರು. ಅಲ್ಲದೇ ಸಚಿವ ಸಂಪುಟ ಸೇರ್ಪಡೆಯ ಬಗ್ಗೆ ಚರ್ಚೆ ನಡೆಸಿದರು.
SHOCKING : ಉದ್ದೇಶಪೂರ್ವಕವಾಗಿ ಕೋವಿಡ್ ಸೋಂಕಿಗೆ ಒಳಗಾದ ಚೀನಾ ಗಾಯಕಿ ಜೇನ್ ಜಾಂಗ್ | Chinese Singer Jane Zhang
ಸಿಎಂ ಜೊತೆಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು, ಶೀಘ್ರವೇ ದೆಹಲಿಗೆ ಹೋಗಿ ಬಂದು ಸಚಿವ ಸಂಪುಟ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.
ಇಂದಿನ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯ ಭರವಸೆ ನೀಡಿದ್ದಾರೆ. ನಾನು ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಸಂಪುಟಕ್ಕೆ ಮರು ಸೇರ್ಪಡೆ ಬಗ್ಗೆ ಖಚಿತ ಭರವಸೆ ನೀಡಿದ್ದಾರೆ. ಉಳಿದವರು ಸಂಪುಟ ಸೇರ್ಪಡೆಯ ಬಗ್ಗೆ ನಮಗೆ ಗೊತ್ತಿಲ್ಲ. ಸದನ ಮುಗಿಯುವ ವೇಳೆ ದೆಹಲಿಗೆ ಹೋಗಿ ಬರುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.