ಹರಿಯಾಣ: ನಿನ್ನೆ ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುದೀರ್ಘ ಭಾಷಣ ಮಾಡಿದ್ದಕ್ಕಾಗಿ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದ್ದಾರೆ.
ಎಂಟೂವರೆ ನಿಮಿಷಗಳ ಸುದೀರ್ಘ ಭಾಷಣದಲ್ಲಿ ಶಾ ಅವರು ನಾಲ್ಕು ಬಾರಿ ಅನಿಲ್ ವಿಜ್ ಅವರಿಗೆ ಅಡ್ಡಿಪಡಿಸಿದ್ದಾರೆ. ಭಾಷಣಕ್ಕೆ ಕೇವಲ ಐದು ನಿಮಿಷಗಳನ್ನು ನಿಗದಿಪಡಿಸಲಾಗಿದೆ ಎಂದು ಭಾಷಣದ ಮಧ್ಯೆ ಮಧ್ಯೆಯೇ ನೆನಪಿಸಿದ್ದಾರೆ. ಕೊನೆಗೂ ಅನಿಲ್ ವಿಜ್ ಅವರು ತಮ್ಮ ಭಾಷಣವನ್ನು ಕಡಿಮೆ ಮಾಡಿದರು.
ಹರಿಯಾಣದ ಸೂರಜ್ಕುಂಡ್ನಲ್ಲಿ ಕೇಂದ್ರ ಗೃಹ ಸಚಿವಾಲಯ ಆಯೋಜಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಅನಿಲ್ ವಿಜ್ ಅವರು ಸುದೀರ್ಘ ಸ್ವಾಗತ ಭಾಷಣ ಮಾಡಿದ್ದಾರೆ.
ಈ ವೇಳೆ ಅಮಿತ್ ಶಾ ಅವರು, ʻಅನಿಲ್ ಜೀ, ನಿಮಗೆ ಐದು ನಿಮಿಷಗಳನ್ನು ನಿಗದಿಪಡಿಸಲಾಗಿದೆ. ನೀವು ಈಗಾಗಲೇ ಎಂಟೂವರೆ ನಿಮಿಷ ಮಾತನಾಡಿದ್ದೀರಿ. ದಯವಿಟ್ಟು ನಿಮ್ಮ ಭಾಷಣವನ್ನು ಕೊನೆಗೊಳಿಸಿ. ಇಷ್ಟು ದೀರ್ಘವಾದ ಭಾಷಣಗಳನ್ನು ನೀಡಲು ಇದು ಸ್ಥಳವಲ್ಲ. ಸಂಕ್ಷಿಪ್ತವಾಗಿ ಇರಿಸಿʼ ಎಂದು ಶಾ ಹೇಳಿದರು. ಆದ್ರೂ ಅನಿಲ್ ಅವರು ತಮ್ಮ ಭಾಷಣವನ್ನು ಮುಂದುವರೆಸಿದರು. ಇದನ್ನು ಕಂಡು ಶಾ ವಿಚಲಿತಗೊಂಡರು. ನಮತ್ರ ಮತ್ತೆ “ಅನಿಲ್ ಜೀ, ದಯವಿಟ್ಟು ನನ್ನನ್ನು ಕ್ಷಮಿಸಿ. ಇದು ಕೆಲಸ ಮಾಡುವುದಿಲ್ಲ. ನಿಮ್ಮ ಭಾಷಣವನ್ನು ಮುಗಿಸಿ” ಎಂದು ಹೇಳಿದರು. ಇದರ ವಿಡಿಯೋ ಸೋಷಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
#Haryana के गृह मंत्री #AnilVij देश के गृह मंत्री #AmitShah के साथ चल रही बैठक में दे रहे थे लंबा-चौड़ा भाषण। इस बीच शाह ने उनके भाषण को बीच में रोकते हुए कह दी ये बात। पूरा मामला जानने के लिए देखें वीडियो। pic.twitter.com/yxv9MjHJgg
— I.khan S.P.(प्रदेश सचिव अल्पसंख्यक सभा) (@islamkhan919) October 28, 2022
ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ವಜಾ ಮಾಡಿದ ಎಲೋನ್ ಮಸ್ಕ್
SHOCKING NEWS: ರಾಜಸ್ಥಾನದಲ್ಲಿ ದೈಹಿಕ ವಿಕಲಾಂಗ ಚೇತನ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಗರ್ಭಿಣಿಯಾದ ಸಂತ್ರಸ್ತೆ
BIG NEWS: ʻಪ್ರಧಾನಿ ಮೋದಿ, ಭಾರತದ ವಿದೇಶಾಂಗ ನೀತಿʼಯನ್ನು ಹಾಡಿ ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಗಂಡನನ್ನೇ ಕೊಲೆ ಮಾಡಿ ಮುಗಿಸಿದ ಪಾಪಿ ಹೆಂಡ್ತಿ