ವೈರಲ್ ನ್ಯೂಸ್ : ಇತ್ತೀಚಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ವಧು-ವರರ ಮದುವೆ ಸಂಬಂಧಿಕರ ಸಮ್ಮುಖದಲ್ಲಿ ನಡೆಯುತ್ತದೆ. ತಾಳಿ ಕಟ್ಟಿದ ನಂತರ ವರ ವಧುವಿಗೆ ಸಿಂಧೂರ ಹಚ್ಚುವ ಶಾಸ್ತ್ರ ನಡೆಯುತ್ತದೆ. ಪುರೋಹಿತರು ಒಂದೆಡೆ ಮಂತ್ರಗಳನ್ನು ಪಠಿಸುತ್ತಿದ್ದರೆ, ವರನು ತನ್ನ ಕೈಯಲ್ಲಿ ಸಿಂಧೂರ ತೆಗೆದುಕೊಂಡು ವಧುವಿನ ಹಣೆಯ ಮೇಲೆ ಉಜ್ಜುತ್ತಾನೆ. ನಂತರ ಎಲ್ಲರೂ ನೋಡುತ್ತಿದ್ದಂತೆ ವಧುವಿನ ಕೆನ್ನೆಗೆ ಮುತ್ತಿಡುತ್ತಾನೆ
ವಧುವಿಗೆ ವರನು ಪ್ರೀತಿಯಿಂದ ಸಿಹಿತಿನಿಸುಗಳನ್ನು ತಿನ್ನಿಸುತ್ತಾನೆ. ಆ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಇನ್ನೊಂದಷ್ಟು ವಧುವಿಗೆ ಬಾಯಿಗೆ ತುರುಕಲು ಮುಂದಾಗುತ್ತಾನೆ. ಆಗ ಸಿಟ್ಟುಕೊಂಡ ವಧು ವರನಿಗೆ ಕಪಾಳಮೋಕ್ಷ ಮಾಡುತ್ತಾಳೆ. ನಂತರ ದಂಪತಿಗಳು ಪರಸ್ಪರ ತಳ್ಳುತ್ತಾರೆ ಸಂಬಂಧಿಕರು ಮಧ್ಯಪ್ರವೇಶಿಸಿ ಅವರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅವರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ವಧು ಮತ್ತು ವರರು ಪರಸ್ಪರ ಕೂದಲನ್ನು ಎಳೆಯುತ್ತಲೇ ಇರುತ್ತಾರೆ ಮತ್ತು ಪರಸ್ಪರ ಹೊಡೆಯುತ್ತಲೇ ಇರುತ್ತಾರೆ.
Kalesh B/w Husband and Wife in marriage ceremony pic.twitter.com/bjypxtJzjt
— Ghar Ke Kalesh (@gharkekalesh) December 13, 2022
ಈ ವೀಡಿಯೊವನ್ನು ‘ಘರ್ಕೆಕಲೇಶ್’ ಬಳಕೆದಾರರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು 76 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದಾರೆ