ನವದೆಹಲಿ:ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದ ಕ್ಷಣ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉತ್ತರಾಖಂಡ್ನ ಮರ್ಸಿಡಿಸ್-ಎಎಂಜಿ ಜಿಎಲ್ಇ 43 ಕಾರು ಅತಿ ವೇಗದಲ್ಲಿ ವಿಭಜಕಕ್ಕೆ ಡಿಕ್ಕಿ ಹೊಡೆಯುವುದನ್ನು ನೋಡಬಹುದಾಗಿದೆ. ರೂರ್ಕಿ ಬಳಿ ಡಿಕ್ಕಿ ಹೊಡೆದ ನಂತರ ವಾಹನಕ್ಕೆ ಬೆಂಕಿ ತಗುಲಿದ್ದರಿಂದ 25 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ನಲ್ಲಿ ಚಿಕಿತ್ಸೆ ಪಡೆದುಕೊರ್ಳಳುತ್ತಿದ್ದಾರೆ.
ಪಂತ್ ತನ್ನ ಕುಟುಂಬದೊಂದಿಗೆ ಹೊಸ ವರ್ಷವನ್ನು ಕಳೆಯಲು ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಕಾರು ಚಾಲನೆ ಮಾಡುವಾಗ ನಿದ್ರೆಗೆ ಜಾರಿದ ಪರಿಣಾಮ ಅವರು ಕಾರಿನ ನಿಯಂತ್ರಣ ಕಳೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅವನು ತನ್ನ ಜೀವವನ್ನು ಉಳಿಸಲು ಕಿಟಕಿಗಳಲ್ಲಿ ಮುರಿದು ಹೊರಗೆ ಬಂದಿದ್ದಾರೆ ಎನ್ನಲಾಗಿದೆ.
ಅವರ ಸ್ಥಿತಿ ಗಂಭೀರವಾಗಿಲ್ಲ ಮತ್ತು ಅವರನ್ನು ಡೆಹ್ರಾಡೂನ್ ನ ಮ್ಯಾಕ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಅವರು ಸಣ್ಣ ಗಾಯಗಳಿಂದ ಬಳಲುತ್ತಿದ್ದರು ಮತ್ತು ಪ್ರಜ್ಞೆ ಹೊಂದಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮುಂಬರುವ ಸರಣಿಗಾಗಿ ಪಂತ್ ಅವರನ್ನು ಇತ್ತೀಚೆಗೆ T20I ತಂಡದಿಂದ ಕೈಬಿಡಲಾಯಿತು.
Praying for #RishabhPant’s speedy recovery. Get well soon, champ!
ऋषभ पंत❤️ pic.twitter.com/EZBCG1i9xe— Vikas Singh🚶♂️ (@Vikas_singhji) December 30, 2022
ऋषभ पंत के कार एक्सीडेंट का CCTV…#pant #RishabhPant pic.twitter.com/CwYzzepeTO
— Khushboo Singh (@imprincy_singh) December 30, 2022