ತೆಲಂಗಾಣ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತೆಲಂಗಾಣದಲ ರುದ್ರಾರಾಮ್ನಿಂದ ಭಾರತ್ ಜೋಡೋ ಯಾತ್ರೆಯನ್ನು ಪುನಾರಂಭಿಸಿದ್ದಾರೆ. ಅದೇ ಸಮಯದಲ್ಲಿ ತೆಲಂಗಾಣದಲ್ಲಿ ನಡೆಯುವ ಬೋನಾಲು ಹಬ್ಬದ ಆಚರಣೆಯಲ್ಲಿ ರಾಹುಲ್ ಪಾಲ್ಗೊಂಡು ಚಾವಟಿಯಿಂದ ತಮ್ಮ ಬೆನ್ನಿಗೆ ಹಲವು ಬಾರಿ ಹೊಡೆದುಕೊಂಡಿದ್ದಾರೆ.
ಬೋನಾಲು ಹಬ್ಬದ ಅಂಗವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಬೆನ್ನ ಮೇಲೆ ಹಲವು ಬಾರಿ ಚಾಟಿ ಬೀಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ನೆರೆದಿದ್ದವರು ಜೈಕಾರ ಹಾಕಿದ್ದಾರೆ.
The whip! #RahulGandhi, on day 57 of his #BharatJodoYarta, which is in #Telangana, participates in state’s traditional ‘Bonalu’ festival practices. In Bonalu, men donning the avatar of ‘potharaju’ whip others/themselves as part of the tradition. #Congress pic.twitter.com/zsCYkXh5Hb
— Rishika Sadam (@RishikaSadam) November 3, 2022
ಇದಕ್ಕೂ ಮೊದಲು, ಹೈದರಾಬಾಡಿನ ಚಾರ್ಮಿನಾರ್ನಲ್ಲಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯ ಭಾಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿದರು. 32 ವರ್ಷಗಳ ಹಿಂದೆ ಚಾರ್ಮಿನಾರ್ನಿಂದ ಪ್ರಾರಂಭವಾದ ರಾಜೀವ್ ಗಾಂಧಿಯವರ ಸದ್ಭಾವನಾ ಯಾತ್ರೆ ನಡೆಸಿದ್ದರು
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯು ನವೆಂಬರ್ 7 ರಂದು ಮಹಾರಾಷ್ಟ್ರವನ್ನು ಪ್ರವೇಶಿಸುವ ಮೊದಲು ತೆಲಂಗಾಣದಲ್ಲಿ ಒಟ್ಟು 375 ಕಿಮೀ ದೂರವನ್ನು ವ್ಯಾಪಿಸಿರುವ ತೆಲಂಗಾಣದಲ್ಲಿ 19 ಅಸೆಂಬ್ಲಿ ಮತ್ತು 7 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದೆ. ಯಾತ್ರೆಯು ನವೆಂಬರ್ 4 ರಂದು ಒಂದು ದಿನದ ವಿರಾಮವನ್ನು ತೆಗೆದುಕೊಳ್ಳುತ್ತದೆ.
ರಾಜ್ಯದಲ್ಲಿ ಪಕ್ಷದ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಬುದ್ಧಿಜೀವಿಗಳು, ಕ್ರೀಡೆ, ವ್ಯಾಪಾರ ಮತ್ತು ಮನರಂಜನಾ ಕ್ಷೇತ್ರದ ವ್ಯಕ್ತಿಗಳು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿದೆ.