ಲಾರೆಲ್ (ಯುಎಸ್): ಸೋಮವಾರ ನಾಸಾ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ನೌಕೆ ಡಿಕ್ಕಿ ಹೊಡೆಸಿದೆ. ಅಪಾಯಕಾರಿ ಕ್ಷುದ್ರಗ್ರಹದಿಂದ ಎದುರಾಗುವ ಅಪಾಯಗಳಿಂದ ಭೂಮಿಯನ್ನು ರಕ್ಷಿಸುವ ಐತಿಹಾಸಿಕ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಡಬಲ್ ಕ್ಷುದ್ರಗ್ರಹ ಪಥ ಬದಲಿಸುವ ಪರೀಕ್ಷೆ (DART) ಇಂಪ್ಯಾಕ್ಟರ್ ತನ್ನ ಗುರಿಯಾದ ಬಾಹ್ಯಾಕಾಶ ʻರಾಕ್ ಡಿಮೊರ್ಫಾಸ್ʼಗೆ 7:14 ಗಂಟೆಗೆ (2314 GMT) ಡಿಕ್ಕಿ ಹೊಡೆದಿದೆ. DART ಗಂಟೆಗೆ ಸುಮಾರು 14,500 miles (23,500 kilometres) ವೇಗದಲ್ಲಿ ಕ್ಷುದ್ರಗ್ರಹದ ಕಡೆಗೆ ಧಾವಿಸಿದ್ದು, ಅದರ ಸ್ಪಷ್ಟ ಚಿತ್ರಣವನ್ನು ನೋಡಬಹುದಾಗಿದೆ.
IMPACT SUCCESS! Watch from #DARTMIssion’s DRACO Camera, as the vending machine-sized spacecraft successfully collides with asteroid Dimorphos, which is the size of a football stadium and poses no threat to Earth. pic.twitter.com/7bXipPkjWD
— NASA (@NASA) September 26, 2022
530 ಅಡಿ ಅಗಲದ (160-ಮೀಟರ್) ಕ್ಷುದ್ರಗ್ರಹದ ಪಥ ಬದಲಿಸುವ ಸಲುವಾಗಿ ಅದಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಲಾಗಿದೆ. ಭೂಮಿಯಿಂದ 11 ದಶಲಕ್ಷ ಕಿಮೀ ದೂರದಲ್ಲಿ ಈ ವಿದ್ಯಮಾನ ನಡೆದಿದೆ.
“ನಾವು ಹೊಸ ಯುಗವನ್ನು ಪ್ರಾರಂಭಿಸುತ್ತಿದ್ದೇವೆ, ಅಪಾಯಕಾರಿ ಕ್ಷುದ್ರಗ್ರಹದ ಪ್ರಭಾವದಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ” ಎಂದು ನಾಸಾದ ಗ್ರಹಗಳ ವಿಜ್ಞಾನ ವಿಭಾಗದ ನಿರ್ದೇಶಕ ಲೋರಿ ಗ್ಲೇಜ್ ಹೇಳಿದರು.
BIG NEWS: ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ, ಟಾಪ್ 10ರಲ್ಲಿ ಮುಕೇಶ್ ಅಂಬಾನಿ ಔಟ್
`TRAING TO BE ORGANIZED’ : `PFI’ ಸಂಘಟನೆಯ ಡೈರಿಯಲ್ಲಿ ಸ್ಪೋಟಕ ಬರಹ ಪತ್ತೆ : ಬೆಚ್ಚಿ ಬಿದ್ದ ಖಾಕಿ ಪಡೆ!