ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇಂದು ಜಾರ್ಗ್ರಾಮ್ ಗೆ ಭೇಟಿ ನೀಡಿದ್ದರು ಈವೇಳೆ ರಸ್ತೆ ಬದಿಯ ಚಹಾ ಅಂಗಡಿಯಲ್ಲಿ ಜನರಗೆ ಪಕೋಡಗಳನ್ನು ಮಾರಾಟ ಮಾಡಿದ್ದಾರೆ.
ಬ್ಯಾನರ್ಜಿ, ಹಲವಾರು ಸ್ಥಳೀಯರಿಂದ ಸುತ್ತುವರಿದಿದ್ದು, ಗ್ರಾಹಕರಿಗೆ ಪಕೋಡಗಳನ್ನು ಹಾಳೆಯಲ್ಲಿ ಸತ್ತಿ ನೀಡುತ್ತಿರುವ ವಿಡಿಯೋವನ್ನು ಸುದ್ಧಿ ಸಂಸ್ಥೆ ಎಎನ್ ಐಹಂಚಕೊಂಡಿದೆ.
ಇದಕ್ಕೂ ಮುನ್ನಾ ಪಶ್ಚಿಮ ಬಂಗಾಳದಲ್ಲಿ ನಡೆದ ಬಿರ್ಸಾ ಮುಂಡಾ ಜಯಂತಿಯಂದು ಸಿಎಂ ಮಮತಾ ಬ್ಯಾನರ್ಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸಿಎಂ ಮಮತಾ ಬ್ಯಾನರ್ಜಿಯವರು ಅಲ್ಲಿದ್ದ ಕಲಾವಿದರ ಬಳಿ ತೆರಳಿ ಸಾಂಪ್ರದಾಯಿಕ ಡೋಲು ಭಾರಿಸಿದರು.ಬಳಿಕ ಕಲಾವಿದರ ಜೊತೆ ನೃತ್ಯ ಮಾಡಿದರು.
#WATCH | West Bengal CM Mamata Banerjee stopped her convoy at a roadside tea stall and started serving pakoda to the people, in Jhargram. pic.twitter.com/2b3NKhXj5q
— ANI (@ANI) November 15, 2022
ನಂತರ ಮಾತನಾಡಿದ ಸಿಎಂ ಮಮತಾ, ಕೇಂದ್ರದ ಮೋದಿ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. ಅಭಿವೃದ್ಧಿ ನಿಧಿ ಪಡೆಯಲು ಪ್ರಧಾನಿ ಮೋದಿಯವರ ಕಾಲಿಗೆ ಬಿದ್ದು ಭಿಕ್ಷೆ ಬೇಡಬೇಕಾ ಎಂದು ಮಮತಾ ಗುಡುಗಿದರು.
ಸಿಎಂ ಮಮತಾ ಬ್ಯಾನರ್ಜಿಯವರು ಬೀದಿ ಬಳಿಇಂಡಿಗಳನ್ನು ಮಾರಾಟ ಮಾಡಿರುವುದು ಇದೇ ಮೊದಲ್ಲ. ಈ ವರ್ಷದ ಆರಂಭದಲ್ಲಿ ಅವರು ಡಾರ್ಜಿಲಿಂಗ್ನ ಒಂದು ಸಣ್ಣ ಸ್ಟಾಲ್ನಲ್ಲಿ ಮೊಮೊಗಳನ್ನು ತಯಾರಿಸಿ ಮಾರಾಟ ಮಾಡಿದ್ದರು.
BIG NEWS: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ನ.21ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ