ಗುರುಗ್ರಾಮ(ಹರಿಯಾಣ): ಹರಿಯಾಣದ ಯಮುನಾನಗರದಲ್ಲಿ ಬುಧವಾರ ರಾವಣ ದಹನ ಆಚರಣೆ ವೇಳೆ ನೆರೆದಿದ್ದ ಜನರ ಮೇಲೆ ರಾವಣನ ಪ್ರತಿಕೃತಿ ಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಈ ವೇಳೆ ಕೆಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ರಾವಣ ದಹನ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿ ದಂಭ್ರಮಿಸುತ್ತಿದ್ದ ಜನ ಸಮೂಹದ ಮೇಲೆ ಪ್ರತಿಕೃತಿ ಅವರ ಮೇಲೆ ಬೀಳುವುದನ್ನು ನೋಡಬಹುದು. ಹರಿಯಾಣದಲ್ಲಿ ದಸರಾ ಆಚರಣೆ ವೇಳೆ ಈ ಘಟನೆ ನಡೆದಿದೆ.
#WATCH | Haryana: A major accident was averted during Ravan Dahan in Yamunanagar where the effigy of Ravana fell on the people gathered. Some people were injured. Further details awaited pic.twitter.com/ISk8k1YWkH
— ANI (@ANI) October 5, 2022
ದೇಶಾದ್ಯಂತ ನಿನ್ನೆ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಆಚರಣೆಗಳ ಪ್ರಮುಖ ಭಾಗವೆಂದರೆ ರಾಮಲೀಲಾ ಪ್ರದರ್ಶನಗಳು, ಜಾತ್ರೆಗಳು ಮತ್ತು ರಾವಣನ ಜೊತೆಗೆ ಅವನ ಮಗ ಮೇಘನಾದ್ ಮತ್ತು ಸಹೋದರ ಕುಂಭಕರನ್ ಅವರ ಪ್ರತಿಕೃತಿಗಳನ್ನು ಸುಡುವುದಾಗಿದೆ.
BIG NEWS : ಡಿವೋರ್ಸ್ ವಾಪಸ್: ದಾಂಪತ್ಯ ಜೀವನ ಮುಂದುವರೆಸಲು ನಟ ಧನುಷ್ & ಐಶ್ವರ್ಯಾ ರಜನಿಕಾಂತ್ ನಿರ್ಧಾರ!