ಹೈದರಾಬಾದ್ : ಭಾನುವಾರ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಮೂರನೇ ಟಿ 20 ಐಗೆ ಆಫ್ಲೈನ್ ಟಿಕೆಟ್ ಪಡೆಯಲು ಹೈದರಾಬಾದ್ನ ಜಿಮ್ಖಾನಾ ಮೈದಾನದ ಸುತ್ತಲೂ ಜಮಾಯಿಸಿದ ಕ್ರಿಕೆಟ್ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಗುರುವಾರ ಲಾಠಿ ಚಾರ್ಜ್ ಮಾಡಿದ್ದಾರೆ.
BIGG NEWS: ಕರ್ನಾಟಕಕ್ಕೆ ಕಾಲಿಟ್ಟ ಚರ್ಮಗಂಟು ರೋಗ; ಹಾವೇರಿಯಲ್ಲಿ ಒಂದೇ ದಿನ ನೂರಾರು ರಾಸುಗಳ ಸಾವು
ಪೇಟಿಎಂ, ಆಫ್ಲೈನ್ ಕೌಂಟರ್ನಲ್ಲಿ ಟಿಕೆಟ್ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಹಿಸಿದ್ದರು. ಕೌಂಟರ್ಗಳನ್ನು ತಲುಪಲು ಅನೇಕ ಕ್ರಿಕೆಟ್ ಅಭಿಮಾನಿಗಳು ಜಿಮ್ಖಾನಾ ಗೇಟ್ನಿಂದ ಜಿಗಿದರು. ಈ ವೇಳೇ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಪೊಲೀಸರು ಮುಂದಾಗಿದ್ದರು. ಪರಿಸ್ಥಿತಿ ಹತೋಟಿ \ಗೆ ಬಾರದಿದ್ದಾಗ ಲಾಠಿಚಾರ್ಚ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗುಂಪನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಕಾಲ್ತುಳಿತ ಉಂಟಾಗಿದೆ ಎನ್ನಲಾಗುತ್ತಿದೆ.
#WATCH | Telangana: A stampede broke out at Gymkhana Ground after a huge crowd of cricket fans gathered there to get tickets for #INDvsAUS match, scheduled for 25th Sept at Rajiv Gandhi International Stadium, Hyderabad. Police baton charged to disperse the crowd
4 people injured pic.twitter.com/J2OiP1DMlH
— ANI (@ANI) September 22, 2022
ವರದಿಗಳ ಪ್ರಕಾರ, ಲಾಠಿ ಚಾರ್ಜ್ನಲ್ಲಿ 20 ಜನರು ಗಾಯಗೊಂಡಿದ್ದು, ಅದರಲ್ಲಿ ಏಳು ಮಂದಿ ಗಾಯಗೊಂಡವರನ್ನು ಸಿಕಂದರಾಬ್ನ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗುತ್ತಿದೆ.
ಮೊಹಾಲಿಯಲ್ಲಿ ಮಂಗಳವಾರ ನಡೆದ ಮೂರು ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಲ್ಕು ವಿಕೆಟ್ಗಳ ಜಯ ಸಾಧಿಸಿದೆ.