ವಿಜಯಪುರ: ನಿನ್ನೆ ಅಗಲಿದಂತ ನಡೆದಾಡುವ ದೇವರು, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ( Siddeshwara Sri ) ಅಂತ್ಯ ಸಂಸ್ಕಾರವನ್ನು ಅವರ ಇಚ್ಛೆಯಂತೆ ಅಗ್ನಿ ಸ್ಪರ್ಷ ಮಾಡುವ ಮೂಲಕ ಜ್ಞಾನಯೋಗಾಶ್ರಮದಲ್ಲಿ ನೆರವೇರಿಸಲಾಯಿತು. ಯಾವುದೇ ಧಾರ್ಮಿಕ ವಿಧಿವಿಧಾನವಿಲ್ಲದೇ ಶ್ರೀಗಳ ಅಂತ್ಯ ಸಂಸ್ಕಾರ ನೇರವೇರಿದೆ. ಈ ಮೂಲಕ ನಡೆದಾಡುವ ದೇವರು ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನರಾದರು.
ಅನಾರೋಗ್ಯದಿಂದಾಗಿ ನಿನ್ನೆ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದರು. ಇಂದು ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವಿಜಯಪುರದ ಸೈನಿಕ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಶ್ರೀಗಳ ಪಾರ್ಥಿವ ಶರೀರವನ್ನು ಅಪಾರ ಭಕ್ತರರ ನಡುವೆ ಅಂತ್ಯ ಸಂಸ್ಕಾರದ ಸ್ಥಳಕ್ಕೆ ತೆರೆದ ವಾಹನದಲ್ಲಿ ಕರೆದು ಹೋಗಲಾಯಿತು. ಇದೇ ವೇಳೇ ದಾರಿ ಉದ್ದಕ್ಕೂ ಸಾವಿರಾರು ಜನರು ನಡೆದಾಡುವ ದೇವರನ್ನು ನೆನಪು ಮಾಡಿ ಕೊಂಡು ಕಣ್ಣೀರ ಜೊತೆಗೆ ವಿದಾಯ ಹೇಳುತ್ತಿದ್ದರು, ಇದಲ್ಲದೇ ಅವರ ಪಾರ್ಥಿವ ಶರೀರವಿದ್ದ ವಾಹನದ ಮೇಲೆ ಹೂವಿನ ಮಳೆಯನ್ನು ಸುರಿಸಿ ಶತಮಾನದ ಸಂತನಿಗೆ ಅಶ್ರುತರ್ಪದ ಮೂಲಕ ಕಳುಹಿಸಿಕೊಡುತ್ತಿದ್ದ ಸನ್ನಿವೇಶ ಎಂತಹವರಲ್ಲಿ ಕೂಡ ಕಣ್ಣೀರು ತರಿಸುತಿತ್ತು.
ಜ್ಞಾನಯೋಗಿಯ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದಿತ್ತು. ಲಕ್ಷ ಲಕ್ಷ ಜನರು ಆಗಮಿಸಿ, ಶ್ರೀಗಳ ಅಂತಿಮ ದರ್ಶನವನ್ನು ಪಡೆದರು. ಇದಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರು, ಸಚಿವರು ವಿವಿಧ ಮಠಾಧೀಶರು ಪಾಲ್ಗೊಂಡು ಸಿದ್ದೇಶ್ವರ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು. ಇ
ಸಂಜೆ 5.15ಕ್ಕೆ ರಾಜ್ಯ ಸರ್ಕಾರದಿಂದ ಪೊಲೀಸ್ ಬ್ಯಾಂಡ್ ನೊಂದಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸೋದಕ್ಕೆ ಸಮಯ ನಿಗದಿ ಪಡಿಸಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿಯವರು ಸಿದ್ದೇಶ್ವರ ಸ್ವಾಮೀಜಿ ( Siddeshwara Swamiji ) ಪಾರ್ಥೀವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ, ಕುಶಲ ತೋಪು ಸಿಡಿಸಿ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು.
ಸೈನಿಕ ಶಾಲೆಯ ಆವರಣದಿಂದ ಮೆರವಣಿಗೆಯ ಮೂಲಕ ಸಿದ್ದೇಶ್ವರ ಸ್ವಾಮೀಜಿಯ ಪಾರ್ಥೀವ ಶರೀರವನ್ನು ಜ್ಞಾನಯೋಗಾನಂದ ಆಶ್ರಮಕ್ಕೆ ತರಲಾಯಿತು. ಭಕ್ತರು ನೀಡಿದ್ದಂತ ಶ್ರೀಗಂಧದ ತುಂಡುಗಳ ಮೇಲೆ ಪಾರ್ಥೀವ ಶರೀರವನ್ನು ಇರಿಸಿ, ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನೆರವೇರಿಸಿದರು.
ಶ್ರೀಗಳ ಇಚ್ಛೆಯಂತೆ ಆಶ್ರಮದ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಷ ಮಾಡಲಾಯಿತು. ಈ ಮೂಲಕ ಜ್ಞಾನಯೋಗಾಶ್ರಮದ ಸಿದ್ಧಪುರುಷ, ಸಿದ್ದೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನರಾದರು
BIGG NEWS : ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ : ಶಾಸಕ ‘ಅರವಿಂದ ಲಿಂಬಾವಳಿ’ ಬಂಧನಕ್ಕೆ ಕಾಂಗ್ರೆಸ್ ಪಟ್ಟು
BIGG NEWS : ದೇಶದ ಜನತೆಗೆ ಗುಡ್ ನ್ಯೂಸ್ ; ‘ಆದಾಯ ತೆರಿಗೆ ವಿನಾಯಿತಿ ಮಿತಿ’ 5 ಲಕ್ಷಕ್ಕೆ ಹೆಚ್ಚಳ |Budget 2023