ತುಮಕೂರು: ಮತ ಚಲಾಯಿಸಿ ಮನೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ, ಮತದಾರರೊಬ್ಬರು ಕುಸಿದು ಬಿದ್ದು ದಿಢೀರ್ ಸಾವನ್ನಪ್ಪಿರುವಂತ ಘಟನೆ ತುಮಕೂರಲ್ಲಿ ನಡೆದಿದೆ.
ತುಮಕೂರಿನ ಎಸ್ ಎಸ್ ಪುರಂ ಮತಗಟ್ಟೆಯಲ್ಲಿ ಇಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತವನ್ನು ಹೆಚ್.ಕೆ ರಮೇಶ್ ಎಂಬುವರು ಪತ್ನಿ ಸಮೇತ ತೆರಳಿ ಚಲಾಯಿಸಿ ಬಂದಿದ್ದರು.
ಹೆಚ್ ಕೆ ರಮೇಶ್ ಅವರು ತಮ್ಮ ಮಾಲೀಕತ್ವದ ಬಟ್ಟೆ ಅಂಗಟಿಗೆ ಮತ ಚಲಾಯಿಸಿ ತೆರಳಿದಂತ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಅವರು ಮಯೂರ ಯುವ ವೇದಿಕೆ ಸದಸ್ಯರು ಕೂಡ ಆಗಿದ್ದರು ಎಂಬುದಾಗಿ ತಿಳಿದು ಬಂದಿದೆ.
‘ನೋಟಾ’ಗೆ ಹೆಚ್ಚು ಮತ ಬಂದರೆ ಮರುಚುನಾವಣೆ: ಆಯೋಗಕ್ಕೆ ‘ಸುಪ್ರೀಂ ಕೋರ್ಟ್’ ನೋಟಿಸ್
ನವದೆಹಲಿ: ಲೋಕಸಭಾ ಚುನಾವಣೆಗೆ ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಈ ವೇಳೆಯಲ್ಲಿ ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ.
ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ ನಡೆಸುವ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಗಣನೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.
ಚುನಾವಣೆಯಲ್ಲಿ ನೋಟಾಗೆ ಅತಿ ಹೆಚ್ಚು ಮತ ಬಂದರೆ, ಆ ಕ್ಷೇತ್ರದಲ್ಲಿ ಹೊಸದಾಗಿ ಮರುಚುನಾವಣೆ ನಡೆಸಬೇಕು ಹಾಗೂ ನೋಟಾಗಿಂತ ಕಡಿಮೆ ಮತ ಪಡೆಯುವ ಅಭ್ಯರ್ಥಿಯನ್ನು ಮರು ಚುನಾವಣೆಗೆ ನಿಷೇಧಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೂಚಿಸಬೇಕೆಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.