ಚಿತ್ರದುರ್ಗ: ಹಿರಿಯೂರಲ್ಲಿ ಕೆಂಪೇಗೌಡ ಜಯಂತಿ ಮತ್ತು ಒಕ್ಕಲಿಗರ ಸಮಾವೇಶ ನಡೆಯುತ್ತಿದೆ. ಹಿರಿಯೂರಿನ ನೆಹರು ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.
BIGG NEWS: ಜ್ಞಾನವಾಪಿ ಪ್ರಕರಣ: ದೂರುದಾರ ಮಹಿಳೆಯ ಪತಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆ| threat calls
ಮತ್ತೊಮ್ಮೆ ಸಿಎಂ ಆಗುವ ಕಸನನ್ನ ಡಿಕೆ ಶಿವಕುಮಾರ್ ಬಿಚ್ಚಿಟ್ಟಿದ್ದಾರೆ. ನಮ್ಮ ಸಮುದಾಯ ನಾಯಕರುಗಳನ್ನು ತಯಾರು ಮಾಡಬೇಕಿದೆ.
ಮುಂದಿನ ದಿನಗಳಲ್ಲಿ ಅನೇಕ ಅವಕಾಶಗಳು ಬರುತ್ತದೆ. ನಿಮ್ಮ ವಿವೇಚನೆಗೆ ಬಿಡುತ್ತೀನಿ ನಾನು ಎಂದಿದ್ದಾರೆ.
ಶ್ರೀಗಳಿಗೆ ಹೇಳಿದ್ದೀನಿ ಬೆಳಕು ಕಿಟಕಿ, ಬಾಗಿಲು ತೆರೆದು ಮನೆ ಬಾಗಿಲಿಗೆ ಬರ್ತಿದೆ. ಕರ್ಕೊಂಡ್ ಮನೆ ಬಾಗಿಲಿಗೆ ಬರೋ ಲಕ್ಷ್ಮಿಯನ್ನು ಸರಿಯಾಗಿ ಮನೆಗೆ ಸೇರಿಸಿಕೊಳ್ಳಿ. ಈ ಕುರಿತು ಶ್ರೀಗಳಿಗೆ ನಾನು ಕೈ ಮುಗಿದು ಹೇಳಿದ್ದೀನಿ.ಅವರು ಮುಚ್ಚಿ ಬಿಡ್ಲಿ ಇಲ್ಲ ವಾಪಾಸ್ ಓಡಿಸಲಿ ಅವರಿಗೆ ಬಿಟ್ಟಿದ್ದು.
BIGG NEWS: ಜ್ಞಾನವಾಪಿ ಪ್ರಕರಣ: ದೂರುದಾರ ಮಹಿಳೆಯ ಪತಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆ| threat calls
ನಾನು ಬೇರೆ ಸಂದರ್ಭದಲ್ಲಿಯೂ ರಾಜಕಾರಣ ಮಾತಾಡೇ ಮಾತಾಡ್ತೀನಿ. ನಮ್ಮಲ್ಲಿಯೂ ಕೂಡ ಜನರು ಪ್ರೀತಿ ವಿಶ್ವಾಸ ಇಟ್ಕೊಂಡಿದ್ದೀರಿ.
ಸಮರ್ಥ ನಾಯಕರನ್ನು ಸಮಾಜಕ್ಕೆ ಕೊಟ್ಟು ಸಾಕ್ಷಿಗುಡ್ಡೆ ಮಾಡಬೇಕು ಎಂದು ಆಸೆ ನಿಮ್ಮಲ್ಲಿಯೂ ಇದೆ. ಒಂದು ಛಲ ಇದೆ, ಇದಕ್ಕೆ ನಿಮ್ಮ ಆಶೀರ್ವಾದ ಬೇಕಾಗಿದೆ ಎಂದರು. ಬೇರೆ ದಿನ ಬಂದು ಇದಕ್ಕಿಂತ ಅನೇಕ ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ತೀನಿ.ಈ ಡಿಕೆ ಶಿವಕುಮಾರ್ ನಿಮ್ಮ ಮಗ, ನನ್ನ ಕಷ್ಟ ಕಾಲದಲ್ಲಿ ನಿಂತಿದ್ದೀರಿ.ಮುಂದಕ್ಕೂ ನಿಂತು ಕೊಳ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.