ಶಿವಮೊಗ್ಗ: ದಿನಾಂಕ 03.12.2022 ರಂದು ನಡೆದ ರಾಜ್ಯಮಟ್ಟದ ಮಹಾ ಸಭೆಯನ್ನು ಮಾನ್ಯ ಶಾಸಕರು ಹಾಗೂ ಸಂಘದ ಗೌರವಾಧ್ಯಕ್ಷರಾದ ಆಯನೂರು ಮಂಜುನಾಥ್ ರವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು.
ಉದ್ಘಾಟನ ಭಾಷಣವನ್ನು ಮಾಡಿದ ಮಾನ್ಯ ಗೌರವಾಧ್ಯಕ್ಷರು KSHCOEA ಸಂಘಟನಾತ್ಮಕವಾಗಿ ಬಲಗೊಂಡು ಬಿಎಂಎಸ್ ನ ಮಾರ್ಗದರ್ಶನದಲ್ಲಿ ಒಗ್ಗಟ್ಟಾಗಿ ನಡೆದಲ್ಲಿ ಆ ಶಕ್ತಿಗೆ ಯಾವುದೇ ಸರ್ಕಾರವು ಬೇಡಿಕೆಗಳನ್ನು ಈಡೇರಿಸುತ್ತದೆ ಎಂದು ತಿಳಿಸಿ ಇಲ್ಲಿಯವರೆಗೆ ಉತ್ತಮವಾಗಿ ಸಂಘಟಿಸುತ್ತಾ ಬಂದಿರುವ ಎಲ್ಲರಿಗೂ ಅಭಿನಂದಿಸುತ್ತ, 15% ವೇತನ ಹೆಚ್ಚಳ ಸೇರಿದಂತೆ ಸರ್ಕಾರದ ಹಂತದಲ್ಲಿ ಬಾಕಿ ಇರುವ ಉಳಿದ ಪ್ರಮುಖ ಬೇಡಿಕೆಗಳು ಶೀಘ್ರದಲ್ಲಿ ಈಡೇರಿಲಿವೆ ಮತ್ತು ಅದಕ್ಕೆ ಸಂಘವು ಭದ್ಧವಾಗಿವೆ ಎಂದು ತಿಳಿಸಿದರು.
ಬಿ.ಎಂ.ಎಸ್’ನ ರಾಜ್ಯಾಧ್ಯಕ್ಷ ಶಂಕರ್ ಸುಲೇಗಾಂವ್ ಮಾತನಾಡಿ ಮಾನ್ಯ ಶಾಸಕರು ಹಾಗೂ ಗೌರವಾಧ್ಯಕ್ಷರು ಬಿ.ಎಂ ಎಸ್’ನ ಹಿರಿಯ ಕಾರ್ಯಕರ್ತರು ಮತ್ತು ಅವರ ನೌಕರರ ವರ್ಗದ ಮೇಲಿರುವ ಕಾಳಜಿಗೆ ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸಂಘಟನಾತ್ಮಕವಾಗಿ ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಒತ್ತು ನೀಡಿ ಸದಸ್ಯತ್ವವನ್ನು ಮಾಡಿ ಸಂಘಟನೆಯನ್ನು ಬಲಗೊಳಿಸಬೇಕು ಸರ್ವರೂ ಶಿಸ್ತಿನಿಂದ ಹಾಗೂ ರಾಜ್ಯ ಸಂಘವು ಕೈಗುಳ್ಳುವ ನಿರ್ಧಾರಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಕರೆ ನೀಡಿದರು.
ಮಧ್ಯಾಹ್ನದ ನಂತರದ ಅವಧಿಯ ಸಭೆಯಲ್ಲಿ ಈ ವರೆಗೂ ಆದ ಬೆಳವಣಿಗಳ ಮಾಹಿತಿಗಳನ್ನು ನೀಡಿ, ಸುದೀರ್ಘವಾಗಿ ಚರ್ಚಿಸಲಾಯಿತು ಮತ್ತು ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಸಂಘದ ಸದಸ್ಯತ್ವ ಪಡೆಯುವಂತೆ ಮಾಡಲು ಎಲ್ಲಾ ರಾಜ್ಯ ಹಾಗೂ ಜಿಲ್ಲೆಗಳ ಮುಖಂಡರು ಸಮ್ಮತಿ ಸೂಚಿಸಿದ್ದಾರೆ.
ಕೊನೆಯ ಹಂತದಲ್ಲಿ ಎಲ್ಲರ ಅಭಿಪ್ರಾಯಗಳ ಮೇರೆಗೆ ಸರ್ವಾನುಮತದಿಂದ ಎರಡನೇ ಅವಧಿಗೆ ಹಾಲಿ ಸಮಿತಿಯನ್ನು ಮುಂದುವರಿಸಲು ಸಭೆಯ ಅನುಮತಿ ಕೋರಿತು. ಅದರಂತೆ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿದ ಬಿ.ಎಂ.ಎಸ್’ನ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಎಲ್ಲರ ಅಭಿಪ್ರಾಯ ಮೇರೆಗೆ ಮುಂದಿನ ನಿರ್ಧಾರದವರೆಗೆ ಎರಡನೇ ಅವಧಿಗೆ ಮುಂದಿನ ನಿರ್ಧಾರದವರೆಗೆ ಶ್ರೀ. ವಿಶ್ವರಾಧ್ಯ ಹೆಚ್ ವೈ ರಾಜ್ಯ ಅಧ್ಯಕ್ಷರಾಗಿ, ಶ್ರೀ ಶ್ರೀಕಾಂತ್ ಸ್ವಾಮಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಇರುವ ಈ ತಂಡವನ್ನು ಮುಂದುವರೆಸಿ ಘೋಷಿಸಿದರು.
BIGG NEWS : ತಾಕತ್ ಇದ್ದರೆ ಜೀವರಾಜ್ ಧರ್ಮಸ್ಥಳ, ಶೃಂಗೇರಿಗೆ ಬಂದು ಆಣೆ ಮಾಡಲಿ : ಶಾಸಕ ರಾಜೇಗೌಡ ಸವಾಲ್
ನಂತರ KSHCOEA ನೂತನವಾಗಿ ಅಧ್ಯಕ್ಷರಾಗಿ ಪುನರಾಯ್ಕೆಯಾದ ವಿಶ್ವಾರಾಧ್ಯ ಮಾತನಾಡಿ ಮುಂಬರುವ ದಿನಗಳಲ್ಲಿ ಇನ್ನೂ ಕೆಲವು ಅನುಭವಿಗಳನ್ನು, ಸಂಘಟನೆಗೆ ಸಮರ್ಪಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಹೊಸಬರನ್ನು ತಂಡಕ್ಕೆ ಸೇರ್ಪಡೆ ಮಾಡ್ಕೊಂಡು ಸಂಘಟನೆಯನ್ನು ಮುನ್ನಡೆಸುವುದಾಗಿ ತಿಳಿಸಿ ಸಂಘ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಆಗುವ ಬದಲು ಅದೇ ಸಮಯವನ್ನು ನೌಕರರ ಎಳಿಗೆಗಾಗಿ ಶ್ರಮವಹಿಸಲು ಕೋರಿದರು.
ಅಧ್ಯಕ್ಷೀಯ ಭಾಷಣದಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ ಜಾರಿ, ಖಾಯಂಯಾತಿ (Regularization) ಮತ್ತು ಹೊರಗುತ್ತಿಗೆ ನೌಕರರಿಗಾಗಿ ಸರಕಾರದಿಂದ ಒಂದು ಸಂಸ್ಥೆ ಸಂಘವನ್ನು ಸ್ಥಾಪಿಸುವ ಬಗ್ಗೆ ಬರುವ ದಿನಗಳಲ್ಲಿ ಇನ್ನೂ ಸೃಜಂತ್ಮಕವಾಗಿ ಮತ್ತು ಎಲ್ಲಾ ಹಂತಗಳಲ್ಲಿ ಒಂದಾಗಿ ಹೋರಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಗುತ್ತಿಗೆ ಹೊರಗುತ್ತಿಗೆ ನೌಕರರ ನಿಜ ಧ್ವನಿಯಾಗಿ ಸತತವಾಗಿ ಕಳೆದ ಮೂರು ವರ್ಷಗಳಿಂದ ಯಶಸ್ವೀಯಾಗಿ ಹೋರಾಟಗಳ ಮುಖಾಂತರ ಕಾರ್ಯನಿರ್ವಹಿಸಿದೆ ಮತ್ತು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅತ್ಯಂತ ಜವಾಬ್ದಾರಿ ಯುತ ವಾಗಿ ಕಾರ್ಯನಿರ್ವಹಿಸಲಿದೆ. ಕೆಲವರ ಸ್ವಹಿತಶಕ್ತಿಗಾಗಿ ಹುನ್ನಾರದಿಂದ ನಮ್ಮ ಒಗಟನ್ನು ಕದಡುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಲು ಈ ಮೂಲಕ ತಿಳಿಸಿದರು. ಸದಾ ಗುತ್ತಿಗೆ, ಹೊರಗುತ್ತಿಗೆ ನೌಕರರ ಜೀವನ ಮಟ್ಟ ಸುಧಾರಣೆಗಾಗಿ ಶ್ರಮಿಸುತ್ತಿರುವ ಈ ಸಂಘಟನೆಯನ್ನು ತಮ್ಮ ಅಸ್ಮಿತೆಯಾಗಿ ಭಾವಿಸಿರುವ 30000 ಸಾವಿರ ನೌಕರರ ಸಂಘವು ಸದಾ ಚಿರಋಣಿ ಎಂದು ಉದ್ಘೋಷದ್ ಧನ್ಯವಾದವನ್ನು ಸಂಘದ ವತಯಿಂದ ಎಲ್ಲಾ ಪ್ರಮುಖ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಅರ್ಪಿಸಿದರು.
ಕೊನೆಯದಾಗಿ ಸಂಘದ ವತಿಯಿಂದ ಈ ಸಭೆಯನ್ನು ಆಯೋಜಿಸಿದ KSHCOEA ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಶಿಲ್ಪಿ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಅಲಗವಾಡಿ ಮತ್ತು ರಾಜ್ಯ ಕಾರ್ಯದರ್ಶಿಗಳಲ್ಲೊಬ್ಬರಾದ ರುದ್ರೇಶ ಹಾಗೂ ಸಮಸ್ತ ಶಿವಮೊಗ್ಗ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಭೆಯಲ್ಲಿ ಬಿ.ಎಂ.ಎಸ್’ನ ರಾಜ್ಯಾಧ್ಯಕ್ಷರಾದ ಶಂಕರ್ ಸುಲೇಗಾಂವ್, ರಾಜ್ಯ ಪ್ರಧಾನ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಲ್.ವಿಶ್ವನಾಥ್, ಹಿರಿಯ ಮುಖಂಡರಾದ ಇಂದ್ರೇಶ್, ಪುರುಷೋತ್ತಮ್, ನೀಲಕಂಠ ರೆಡ್ಡಿ, KSHCOEA ರಾಜ್ಯದ್ಯಕ್ಷರಾದ ವಿಶ್ವರಾಧ್ಯ ಹೆಚ್. ವೈ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ಸ್ವಾಮಿ, ರಾಜ್ಯ ಮಾಧ್ಯಮ ಕಾರ್ಯದರ್ಶಿಗಳಾದ ಗಿರೀಶ್ ಮತ್ತು ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಇತರೆ ಮುಖಂಡರು ಹಾಜರಿದ್ದರು.