ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆದರೆ ಇತ್ತೀಚೆಗೆ ಅವರು ಜರ್ಮನ್ ಮೂಲದ ಪ್ರಸಿದ್ಧ ಇನ್ಫ್ಲುಯೆನ್ಸರ್ ‘ಲಿಜಾಲಾಜ್’ (Lizzalazz) ಅವರ ಫೋಟೋವೊಂದನ್ನು ಲೈಕ್ ಮಾಡಿದ್ದು, ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.
ಲಿಜಾಲಾಜ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಗ್ಲಾಮರಸ್ ಫೋಟೋವೊಂದಕ್ಕೆ ವಿರಾಟ್ ಕೊಹ್ಲಿ ಲೈಕ್ ಒತ್ತಿದ್ದಾರೆ. ಇದರ ಸ್ಕ್ರೀನ್‌ಶಾಟ್‌ಗಳು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಅವರ ಈ ಲೈಕ್ ಕಂಡು ನೆಟ್ಟಿಗರು ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ. “ವಿರಾಟ್ ಭಾಯ್, ಅನುಷ್ಕಾ ಶರ್ಮಾ ಅವರು ಈ ಲೈಕ್ ನೋಡಿದರೆ ಪಕ್ಕಾ ಸಿಟ್ಟಾಗುತ್ತಾರೆ,” ಎಂದು ಕೆಲವರು ಕಾಲೆಳೆದಿದ್ದರೆ, ಇನ್ನು ಕೆಲವರು “ಇದು ಕೇವಲ ಆಕಸ್ಮಿಕವಾಗಿ ನಡೆದ ಲೈಕ್ ಇರಬಹುದು,” ಎಂದು ಅವರ ಪರವಾಗಿ ಮಾತನಾಡುತ್ತಿದ್ದಾರೆ.
ಲಿಜಾಲಾಜ್ ಜರ್ಮನಿಯ ಪ್ರಸಿದ್ಧ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದು, ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಭಾರತೀಯ ಸೆಲೆಬ್ರಿಟಿಗಳೂ ಸಹ ಇವರ ಪೋಸ್ಟ್‌ಗಳನ್ನು ಗಮನಿಸುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.








