Zomato ದಲ್ಲಿ ಕೆಲಸ ಮಾಡುವ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಯೊಬ್ಬರು ಗಾಲಿಕುರ್ಚಿಯಲ್ಲಿ ಆಹಾರವನ್ನು ತಲುಪಿಸಲು ಹೋಗುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಗ್ರೂಮಿಂಗ್ ಬುಲ್ಸ್ ಎಂಬ ಪೇಜ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ಇದರಲ್ಲಿ”ಸ್ಫೂರ್ತಿಯ ಅತ್ಯುತ್ತಮ ಉದಾಹರಣೆ” ಎಂದು ಶೀರ್ಷಿಕೆ ಬರೆಯಲಾಗಿದೆ.
View this post on Instagram
ಡೆಲಿವರಿ ಏಜೆಂಟ್ಅನ್ನು ಚೆನ್ನೈ ಮೂಲದ 7 ವರ್ಷದಗಣೇಶ್ ಮುರುಗನ್ ಎಂದು ಗುರುತಿಸಲಾಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಕಳೆದ ತಿಂಗಳು ಗಣೇಶ್ ಮುರುಗನ್ ಅವರ ಕಥೆಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಗಣೇಶ್ ಭಾರತದ ಮೊದಲ ಗಾಲಿಕುರ್ಚಿ ಆಹಾರ ವಿತರಣಾ ಪಾಲುದಾರ. ಇವರು ಐಐಟಿ ಮದ್ರಾಸ್ನ ಸ್ಟಾರ್ಟ್ಅಪ್ನಿಂದ ವಿನ್ಯಾಸಗೊಳಿಸಲಾದ ಅವರ ಟು-ಇನ್-ಒನ್ ವೀಲ್ಚೇರ್ ಅನ್ನು ಆಹಾರ ವಿತರಣೆಗಾಗಿ ಹೋಗಲು ಬಳಸುತ್ತಾರೆ. ಇದರಲ್ಲಿ ಬಹಳ ಸುಲಭವಾಗಿ ಸಾಗುವಂತೆ ಮೋಟಾರೀಕರಿಸಲಾಗಿದೆ. ಈ ವೀಲ್ಚೇರ್ನಲ್ಲಿ ಒಂದು ಬಟನ್ನನ್ನು ಒತ್ತಿದರೆ ವಾಹನವಾಗಿ ಪರಿವರ್ತಿಸಬಹುದು ಮತ್ತು ಹಿಂದಿನ ಭಾಗವು ಸರಳವಾದ ಗಾಲಿಕುರ್ಚಿಯಾಗಿ ಬದಲಾಗುತ್ತದೆ.
ಗಣೇಶ್ ಅವರ ಈ ಕಥೆಯು ನೆಟ್ಟಿಗರ ಮನ ಮುಟ್ಟಿದೆ. ವೈರಲ್ ವೀಡಿಯೊದಲ್ಲಿ ಅವರು ಕೆಲಸ ಮಾಡುತ್ತಿರುವುದನ್ನು ನೋಡಿದ ನೆಟ್ಟಿಗರು ಅವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ. ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗೆ ಕೆಲಸ ನೀಡಿದ Zomatoಗೆ Instagram ಬಳಕೆದಾರರು ಶ್ಲಾಘಿಸಿದ್ದಾರೆ. “ನಿಮಗೆ ಕೆಲಸ ನೀಡಿದ Zomato ಮೇಲ್ವಿಚಾರಕರಿಗೆ ಧನ್ಯವಾದ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
BMRCL: ಮೆಟ್ರೊ ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ನಿಲ್ದಾಣದ ಲಿಫ್ಟ್ ಬಳಸಲು ಟೋಕನ್….!