ರಾಮನಗರ : ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಸವಲಿಂಗ ಸ್ವಾಮೀಜಿ ಹನಿಟ್ರ್ಯಾಪ್ ಗೆ ಬಲಿಯಾಗಿರುವ ಕುರಿತಂತೆ ಶಂಕೆ ವ್ಯಕ್ತವಾಗಿದೆ. ಸ್ವಾಮೀಜಿ, ಮಹಿಳೆಯೊಂದಿಗೆ ವೀಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) ಮಠದಲ್ಲೇ ಸೋಮವಾರ ನೇಣಿಗೆ ಶರಣಾಗಿದ್ದರು. ಇದೀಗ ಸ್ವಾಮೀಜಿಯವರು ಡೆತ್ ನೋಟು ಪತ್ತೆಯಾಗಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಎಂದು ಉಲ್ಲೇಖಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.
ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್ ನಡೆದಿದ್ದು, ಡೆತ್ನೋಟ್ನಲ್ಲಿ ಸಂಚಿನ ಬಗ್ಗೆ ಕುಂಚಗಲ್ ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿ ಬರೆದಿದ್ದಾರೆ. ಕುಂಚಗಲ್ ಸ್ವಾಮೀಜಿ ಕೆಳಗಿಳಿಸಲು ಮತ್ತೋರ್ವ ಸ್ವಾಮೀಜಿಯಿಂದ ಮಾಸ್ಟರ್ ಪ್ಲಾನ್ ನಡೆದಿತ್ತು, ನನ್ನ ಮಠವನ್ನು ಕಿತ್ತುಕೊಳ್ಳಬೇಕು, ನಾನು ಅವರ ಕಂಟ್ರೋಲ್ನಲ್ಲಿರಬೇಕು, ಇದೇ ಕಾರಣಕ್ಕೆ ಮಠಕ್ಕೆ ಆ ಸ್ವಾಮೀಜಿ ಓರ್ವ ಯುವತಿಯನ್ನು ಬಿಟ್ಟಿದ್ರು, ಆ ಯುವತಿಯ ಸಲುಗೆಗೆ ಮರುಳಾಗಿ ನಾನು ಹೆಣ್ಣಿನ ಮೋಹಕ್ಕೆ ಬಿದ್ದಿದ್ದೆ. ಆತನ ಗಾಳಕ್ಕೆ ಬಲಿಯಾದೆ ಎಂದು ಬಸವಲಿಂಗಶ್ರೀ ಡೆತ್ನೋಟ್ ಬರೆದಿದ್ದಾರೆ ಎನ್ನಲಾಗಿದೆ.