ಮಧ್ಯಪ್ರದೇಶ: ಗ್ವಾಲಿಯರ್ನಲ್ಲಿ ದಿವ್ಯಾಂಗನಿಗೆ ಬ್ರಿಡ್ಜ್ ದಾಟಲು ಪೊಲೀಸ್ ಅಧಿಕಾರಿಯೊಬ್ಬರು ಸಹಾಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾನ್ಸ್ಟೆಬಲ್ ಬ್ರಜೇಶ್ ತೋಮರ್ (ಸಂಚಾರ) ಎಂದು ಗುರುತಿಸಲಾಗಿದ್ದು, ಸಿಟಿ ರೈಲ್ವೇ ನಿಲ್ದಾಣದಲ್ಲಿ ನಿಯೋಜಿಸಲಾಗಿದ್ದ ವಿಕಲಚೇತನ ವ್ಯಕ್ತಿಯ ತ್ರಿಚಕ್ರ ವಾಹನವನ್ನು ತಳ್ಳುತ್ತಿರುವುದು ಕಂಡುಬಂದಿದೆ.
#WATCH: Traffic cop helps #divyangjan cross bridge in Gwalior, video of kind act goes viral
Identified as constable #BrajeshTomar (Traffic) was seen pushing the tricycle of the differently-abled individual.#IndiaNews #MPNews #ViralVideos #Trending pic.twitter.com/kzDqmJekdn
— Free Press Journal (@fpjindia) December 12, 2022
ವಿಕಲಚೇತನ ವ್ಯಕ್ತಿಯೊಬ್ಬರು ಸೇತುವೆಯನ್ನು ದಾಟಲು ದಯಮಾಡಿ ಸಹಾಯ ಮಾಡುವಂತೆ ಸ್ಥಳೀಯರನ್ನು ಕೇಳಿಕೊಂಡಿದ್ದು, ಆದರೆ ಯಾರೂ ಸಹಾಯಕ್ಕೆ ಮುಂದಾಗಿಲ್ಲ. ಇದನ್ನು ಕಂಡ ಟ್ರಾಫಿಕ್ ಪೋಲೀಸ್ ಸಹಾಯ ಮಾಡಲು ಮುಂದಾಗಿದ್ದು, ಮಾರ್ಗವನ್ನು ದಾಟಲು ಸಹಾಯ ಮಾಡಿದನು. ಈ ಹೃದಯ ಸ್ಪರ್ಶಿ ವಿಡಿಯೋವನ್ನು ಕಾರು ಚಾಲಕನೊಬ್ಬ ವಿಡಿಯೋ ಸೆರೆ ಹಿಡಿದಿದ್ದಾನೆ.
ಘಟನೆಯ ನಂತರ, ಶುಕ್ರವಾರ ಡಿಎಸ್ಪಿ ನರೇಶ್ ಬಾಬು ಅನೌಟಿಯಾ ಅವರು ಇತರ ಅಧಿಕಾರಿಗಳು ಸೇರಿದಂತೆ ಫೂಲ್ ಬಾಗ್ ಪ್ರದೇಶಕ್ಕೆ ತೋಮರ್ ಅವರನ್ನು ಕರೆದು ಹೂವಿನ ಹಾರದೊಂದಿಗೆ ಅಭಿನಂದಿಸಿದರು. ಅಂತಹ ವ್ಯಕ್ತಿಗಳಿಗೆ ಸಹಾಯ ಮಾಡಲು ಪ್ರಯಾಣಿಕರನ್ನು ಕೇಳುವಾಗ ಕಾನ್ಸ್ಟೆಬಲ್ ಸಹಾಯ ಮಾಡಿದ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ವಿಡಿಯೋ ಚಿತ್ರೀಕರಣ ಅಥವಾ ವೈರಲ್ ಆಗಿರುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಬ್ರಜೇಶ್ ವ್ಯಕ್ತಪಡಿಸಿದ್ದಾರೆ. ಘಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸಂಬಂಧಿಕರು ಅವರಿಗೆ ಕರೆ ಮಾಡಿದಾಗ ಮಾತ್ರ ರೆಕಾರ್ಡಿಂಗ್ ಮಾಡಿದ ವಿಡಿಯೋ ಕಂಡು ಅಚ್ಚರಿಪಟ್ಟಿದ್ದಾರೆ