ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಸ್ತೆಯಲ್ಲಿ ತೆರಳುವಾಗ ಕೃತ್ಯ ಎಸಗುವುದೆಂದರೇ ಒಂದಷ್ಟು ಜನರಿಗೆ ಭಾರೀ ಇಷ್ಟ..ಅದಲ್ಲೂ ಕೆಲವರಂತೂ ರಸ್ತೆಯಲ್ಲಿ ಓಡಾಡುತ್ತಿರೋ ಪ್ರಾಣಿಗಳನ್ನು ಹೊಡೆಯುವುದು, ತಿಂದಿರೋ ತಿಂಡಿಯ ಪ್ಯಾಕೇಟ್ಗಳನ್ನು ಅಲ್ಲಲ್ಲಿ ಎಸೆಯುವುದು ಕೂಡಾ ನೀವು ನೋಡಿರಬಹುದು. ಇಂತಹದ್ದೇ ಕೃತ್ಯ ಎಸಗುವಾಗ ಎಡವಟ್ಟಾದ ವಿಡಿಯೋ ವೈರಲ್ ಆಗಿದೆ
ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಹತ್ತಿರ ಚಾಲನೆ ಮಾಡುತ್ತಿದ್ದ ಇನ್ನೊಬ್ಬ ಬೈಕ್ ಸವಾರನನ್ನು ಒದೆಯಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮೂಲತಃ ರೆಡ್ಡಿಟ್ನಲ್ಲಿ ಹಂಚಿಕೊಂಡ ಕ್ಲಿಪ್ನಲ್ಲಿ ಮಹಿಳೆಯೊಬ್ಬರು ತನ್ನ ಬೈಕ್ನ ಹಿಂಭಾಗದಿಂದ ತನ್ನ ಪಕ್ಕದಲ್ಲಿ ಚಾಲನೆ ಮಾಡುತ್ತಿದ್ದ ಇನ್ನೊಬ್ಬ ಸವಾರನ ಮೇಲೆ ಕಾಲಿನಲ್ಲಿ ತುಳಿಯೋದಕ್ಕೆ ಹೋಗಿ ಆವಳೆ ಬಿದ್ದಿರುವ ಘೋರ ದುರಂತ ಘಟನೆ ಬೆಳಕಿಗೆ ಬಂದಿದೆ.
Instant Karma: Woman falls off the bike after trying to kick another rider#InstantKarma #Karma #viral #trending #video pic.twitter.com/W4Q4tCmUIk
— PieBuzz (@piebuzzinc) November 8, 2022
ಆಕೆ ಬಿದ್ದಾಗ ಹಿಂದಿನಿಂದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಜನರು ಕೂಡ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ. ಮಹಿಳೆ ಗಾಯಗೊಂಡಂತೆ ತೋರುತ್ತಿಲ್ಲ ಎಂದುಕೊಂಡು ಮುಂದೆ ಸಾಗಿದ್ದಾರೆ. ಬಳಕೆದಾರರು ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ “ಹಹಹಾ ಹ್ಹಾ ಆಕೆ ಬಿದ್ದಿರುವುದು ಒಳ್ಳೆಯದ್ದಾಗಿದೆ ಎಂದು ಕುಷಿ ಪಟ್ಟಿದ್ದಾರೆ.