ನವದೆಹಲಿ: ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಭಾರತೀಯ ರೈಲ್ವೆ ನೀಡಿದ ಆಮ್ಲೆಟ್ನಲ್ಲಿ ಜಿರಳೆಯೊಂದು ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಆಮ್ಲೆಟ್ನಲ್ಲಿ ಜಿರಳೆಯೊಂದು ಇರುವುದನ್ನು ಮನಗೊಂಡ ಅವರು ಅದರ ಚಿತ್ರವನ್ನು ತೆಗೆದುಕೊಂಡು ಅದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೇ ಅವರು ತನ್ನ 2.5 ವರ್ಷದ ಮಗಳಿಗೆ ಬುಕ್ ಮಾಡಿದ್ದ ಊಟದ ಮೊಟ್ಟೆ ಆಮ್ಲೇಟ್ನಲ್ಲಿ ಒಳಗೆ ಜಿರಳೆಯನ್ನು ಕಂಡುಕೊಂಡಿದ್ದೇನೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
“16 ಡಿಸೆಂಬರ್ 2022, ನಾವು ದೆಹಲಿಯಿಂದ (2222) ಪ್ರಯಾಣಿಸುತ್ತೇದ್ದೇವು. ಬೆಳಿಗ್ಗೆ, ನಾವು ಮಗುವಿಗೆ ಹೆಚ್ಚುವರಿ ಆಮ್ಲೆಟ್ ಆರ್ಡರ್ ಮಾಡಿದೆವು. ನಾವು ಆರ್ಡರ್ ಮಾಡಿದ್ದ ಆಹಾರದಲ್ಲಿ ಇರುವುದನ್ನು ನೋಡಿ ಜಿರಳೆ? ನನ್ನ ಮಗಳಿಗೆ 2.5 ವರ್ಷ ವಯಸ್ಸಾಗಿದೆ, ಏನಾದರೂ ಸಂಭವಿಸಿದರೆ ಅದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೇ ಅವರು ಟ್ವಿಟ್ನಲ್ಲಿ ಭಾರತೀಯ ರೈಲ್ವೆ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ರೈಲ್ವೆ ಪ್ರಯಾಣಿಕರಿಗೆ ಆನ್ ಲೈನ್ ಬೆಂಬಲ ಸೇವೆಯಾದ ರೈಲ್ವೆಸೇವಾ, “ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ್ದು. ಸರ್ ದಯವಿಟ್ಟು ಪಿಎನ್ಆರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೇರ ಸಂದೇಶದಲ್ಲಿ (DM) ಹಂಚಿಕೊಳ್ಳಿ ಅಂತ ಹೇಳಿದೆ.
ಪ್ರಯಾಣಿಕನ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದ ನಂತರ, ಸೇವಾ ಪೂರೈಕೆದಾರರಿಗೆ ಅವರ ಕಡೆಯಿಂದ ಲೋಪಗಳಿಗಾಗಿ 1 ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿದೆ ಮತ್ತು ನಿರ್ಲಕ್ಷ್ಯ ಮತ್ತು ಅಡುಗೆಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗಿದೆ ಅಂತ ತಿಳಿಸಿದೆ.
16dec2022,We travel from Delhi by (22222). In morning, we ordered extra omlate for baby. See attach photo of what we found! a cockroach? My daughter 2.5 years old if something happened so who will take the responsibilities @PMOIndia @PiyushGoyal @PiyushGoyalOffc @RailMinIndia pic.twitter.com/X6Ac6gNAEi
— Yogesh More – designer (@the_yogeshmore) December 17, 2022