ಭರತ್ಪುರ್ : ಛತ್ತೀಸ್ಗಢದ ವ್ಯಕ್ತಿಯೊಬ್ಬರು ರಾಜ್ಯ ಸರ್ಕಾರವು ಮನೇಂದ್ರಗಢ-ಚಿರ್ಮಿರಿ-ಭರತ್ಪುರ್ (ಎಂಸಿಬಿ) ಅನ್ನು ಹೊಸ ಜಿಲ್ಲೆಯನ್ನಾಗಿ ಮಾಡದ ಹೊರತು ಗಡ್ಡ ಬೋಳಿಸದಿರಲು ನಿರ್ಧರಿಸಿದ್ದರು. ಸೆಪ್ಟೆಂಬರ್ 09 ರಂದು ರಾಜ್ಯ ಸರ್ಕಾರವು ಎಂಸಿಬಿಯನ್ನು 32ನೇ ಜಿಲ್ಲೆಯಾಗಿ ಪ್ರಾರಂಭಿಸುವ ಮೂಲಕ ಅವರ ಸಂಕಲ್ಪವನ್ನು ಈಡೇರಿಸಲಾಯಿತು. ಅದರು ಬರೊಬ್ಬರಿ 21 ವರ್ಷಗಳ ನಂತರ ಅವರು ತಮ್ಮ ಗಡ್ಡಕ್ಕೆ ಗುಡ್ ಬೈ ಹೇಳಿದ್ದಾರೆ. ಮನೇಂದ್ರಗಢದ ರಾಮ್ಶಂಕರ್ ಗುಪ್ತಾ ಅವರು ಆರ್ಟಿಐ ಕಾರ್ಯಕರ್ತರಾಗಿದ್ದಾರೆ.
“ಮಣೇಂದ್ರಗಢ-ಚಿರ್ಮಿರಿ-ಭರತ್ಪುರ ಜಿಲ್ಲೆ ಆಗದಿರುವವರೆಗೆ ನಾನು ನನ್ನ ಗಡ್ಡವನ್ನು ಬೋಳಿಸುವುದಿಲ್ಲ ಎಂದು ನಿರ್ಣಯ ಕೈಗೊಂಡಿದ್ದರು. ಮನೇಂದ್ರಗಢದ ರಾಮ್ಶಂಕರ್ ಗುಪ್ತಾ ಅವರು ಇದೇ ವೇಳೇ ಮಾತನಾಡಿ, ಮನೇಂದ್ರಗಡ-ಚಿರ್ಮಿರಿ-ಭರತ್ ಪುರ್ ಎಂದಿಗೂ ಜಿಲ್ಲೆಯಾಗದಿದ್ದರೆ, ನಾನು ನನ್ನ ಗಡ್ಡವನ್ನು ಬೋಳಿಸಿಕೊಂಡಿರುತ್ತಿರಲಿಲ್ಲ. ಇದು 40 ವರ್ಷಗಳ ಹೋರಾಟವಾಗಿತ್ತು. ಜಿಲ್ಲೆಯ ಮಾನ್ಯತೆಗಾಗಿ ಹೋರಾಡಿದ ನಿಜವಾದ ಜನರೆಲ್ಲರೂ ನಿಧನರಾಗಿದ್ದಾರೆ. ಈಗ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ” ಎಂದು ಗುಪ್ತಾ ಹೇಳಿದ್ದಾರೆ.