ಬೆಂಗಳೂರು : ನಗರದ ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋ ಹಾಗೂ ಸಲಾರ್ ಪುರಿಯಾ ಅಪಾರ್ಟ್ಮೆಂಟ್ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಮತ್ತೆ ಆರಂಭವಾಗಿದೆ.
ಆದರೆ ಸಣ್ಣ ಸಣ್ಣ ಕಟ್ಟಡಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಿ ಆರ್ಭಟಿಸುತ್ತಿದ್ದ ಜೆಸಿಬಿಗಳು ಟೆಕ್ ದೈತ್ಯ ವಿಪ್ರೋ ಕಂಪನಿ ಮುಂದೆ ಮಂಡಿಯೂರಿದ್ಯಾ ಎಂಬ ಅನುಮಾನ ಮೂಡಿದೆ. ಹೌದು, ವಿಪ್ರೋ ಕಂಪನಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆಯೇ ಜೆಸಿಬಿಗಳು ಕೆಟ್ಟು ನಿಂತಿದ್ದು, ಅದನ್ನು ದುರಸ್ತಿ ಮಾಡುವಲ್ಲಿ ಗಂಟೆಗಟ್ಟಲೇ ಸಮಯ ತೆಗೆದುಕೊಳ್ಳಲಾಗುತ್ತಿದ್ದು, ಈ ವಿಚಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೇಕಂತಲೇ ಅಧಿಕಾರಿಗಳು ಸಮಯ ವ್ಯರ್ಥ ಮಾಡುತ್ತಿದ್ದಾರಾ..? ವಿಪ್ರೋ ಕಂಪನಿ ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬವಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವಿಪ್ರೋ ಕಂಪನಿಯಿಂದ 2.4 ಮೀ. ಅಗಲ ಮತ್ತು 300 ಮೀ. ಒತ್ತುವರಿ ಆಗಿತ್ತು, ಇಷ್ಟೂ ದಿನ ಯಾವುದೇ ತೆರವು ಕಾರ್ಯಾಚರಣೆಗೆ ತಹಶೀಲ್ದಾರ್ ಆಗಮಿಸಿರಲಿಲ್ಲ. ಸೋಮವಾರ 11:30ಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾರ್ಕಿಂಗ್ ಪರಿಶೀಲನೆ ಮಾಡಿದ್ದರು. ಆದರೆ ಕಾರ್ಯಾಚರಣೆ ಸ್ಥಗಿತವಾಗಿತ್ತು. ಅಧಿಕಾರಿಗಳ ಈ ನಡೆ ಜನಾಕ್ರೋಶಕ್ಕೆ ಕಾರಣವಾಗಿತ್ತು.
ಇಂದು ನಗರದ ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋ ಹಾಗೂ ಸಲಾರ್ ಪುರಿಯಾ ಅಪಾರ್ಟ್ಮೆಂಟ್ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಮತ್ತೆ ಆರಂಭವಾಗಿದೆ. ಭಾರಿ ಮಳೆ ನಂತರ ಸಂಭವಿಸಿದ ಜಲಪ್ರವಾಹ ಮುಂದೆ ಸಂಭವಿಸಬಾರದು ಎಂಬ ಕಾರಣಕ್ಕೆ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿತ್ತು. ಅದರಂತೆ ತೆರವು ಕಾರ್ಯಾಚರಣೆ ಆರಂಭಗೊಂಡು ಕೆಲವು ದಿನಗಳವರೆಗೆ ನಗರದಲ್ಲಿ ಬುಲ್ಡೋಜರ್ಗಳು ಕಾರ್ಯಾಚರಣೆ ಶುರು ಮಾಡಿತ್ತು, ಆದ್ರೆ ದೈತ್ಯ ಕಂಪನಿ ವಿಪ್ರೋ ಮಾಡಿಕೊಂಡಿದ್ದ ಒತ್ತವರಿಯನ್ನು ತೆರವುಗೊಳಿಸಲು ಹಿಂದೇಟು ಹಾಕಿತ್ತು.
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಅಕ್ಟೋಬರ್ 2 ರಿಂದ ಜಾರಿ ಯಶಸ್ವಿನಿ ಯೋಜನೆ, ಸಚಿವ ಎಸ್.ಟಿ. ಸೋಮಶೇಖರ್
ಪೋಷಕರು ಬೈಯ್ದಿದ್ದಕ್ಕೆ ಮನನೊಂದು ಶಾಲಾ ಆವರಣದಲ್ಲೇ ಬಾವಿಗೆ ಹಾರಿ ಪ್ರಾಣಬಿಟ್ಟ ವಿದ್ಯಾರ್ಥಿ!