ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಭಾರೀ ವಿವಾದ ಶುರುವಾಗಿದೆ. ʼಹಿಂದೂಗಳ ಕ್ಷಮೆʼಯಾಚಿಸಬೇಕು ಎಂದು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.
ಈ ಚಿತ್ರದಲ್ಲಿ ಭಗವಾನ್ ಶ್ರೀರಾಮ, ಹನುಮಂತನನ್ನು ಮಹಾಕಾವ್ಯದಲ್ಲಿ ವಿವರಿಸಿರುವಂತೆ ತೋರಿಸಲಾಗಿಲ್ಲ. ಅಲ್ಲದೆ ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಹಿಂದೂಗಳ ಕ್ಷಮೆʼಯಾಚಿಸದಿದ್ದರೆ ಬಹಿಷ್ಕಾರದ ಎಚ್ಚರಿಕೆ ಕೂಡ ನೀಡಲಾಗಿದೆ
ಹೀಗಾಗಿ ಚಿತ್ರವನ್ನು ನಿಷೇಧಿಸುವಂತೆ ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.
ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಶ್ರೀ ರಾಮನಾಗಿ ಕಾಣಿಸಿಕೊಂಡರೆ, ಕೃತಿ ಸನೂನ್ ಸೀತಾಮಾತೆಯಾಗಿ ಅಭಿನಯಿಸಿದ್ದಾರೆ.
ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದು, ಈ ಚಿತ್ರ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆಯಾದಾಗ ಸೈಫ್ ಅಲಿ ಖಾನ್ ಅವರ ಲುಕ್ ಕುರಿತೂ ಪ್ರೇಕ್ಷಕರಿಂದ ಟೀಕೆ ಕೇಳಿ ಬಂದಿತ್ತು.