ಅಲಹಾಬಾದ್ : ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಇಂದು ಸಂಜೆ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ಕ್ಯಾಂಪಸ್ ಪ್ರವೇಶಕ್ಕೆ ಸಂಬಂಧಿಸಿದ ವಾಗ್ವಾದವು ನಿಯಂತ್ರಣ ತಪ್ಪಿದೆ. ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ಕಂಡುಬಂತು.
ಒಂದು ಮೋಟಾರ್ ಸೈಕಲ್’ಗೆ ಬೆಂಕಿ ಹಚ್ಚಲಾಗಿದ್ದು, ಎರಡೂ ಕಡೆಯವರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ತರಲು ಪೊಲೀಸರು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಅಂದ್ಹಾಗೆ, ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳದ ವಿರುದ್ಧ ತಿಂಗಳುಗಳ ಕಾಲ ನಡೆದ ಪ್ರತಿಭಟನೆಯ ಭಾಗವಾಗಿರುವ ವಿದ್ಯಾರ್ಥಿ ನಾಯಕರೊಬ್ಬರು ಕ್ಯಾಂಪಸ್ ನಲ್ಲಿರುವ ಬ್ಯಾಂಕ್ ಗೆ ಹೋಗಲು ಬಯಸಿದ್ದರು. ಆದಾಗ್ಯೂ, ಕಾವಲುಗಾರನು ಆತನನ್ನ ತಡೆದಿದ್ದು, ಇದು ವಾದಕ್ಕೆ ಕಾರಣವಾಯಿತು.
ಊಟ ಮಾಡುವಾಗ ‘ನೀರು’ ಕುಡಿಯೋದು ಒಳ್ಳೆಯದಾ.? ‘ಅಪಾಯ’ ತರುತ್ತಾ.? ಇಲ್ಲಿದೆ ಮಾಹಿತಿ