ಶಿವಮೊಗ್ಗ: ಅವರು 68 ಬಾರಿ ರಕ್ತದಾನ ಮಾಡಿದವರು. ಬರೋಬ್ಬರಿ 25 ಬಾರಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಶಸ್ತ್ರ ಚಿಕಿತ್ಸೆಗೆ ನೆರವಾಗಲು ಶಿಬಿರ ಆಯೋಜಿಸಿದವರು. ಆ ಮೂಲಕ ಸಾಮಾಜಿಕ ಸೇವೆಗೈದವರೇ ಸಾಗರದ ವಿಜಯೇಂದ್ರ ಶಾನಭಾಗ್ ಅವರಾಗಿದ್ದಾರೆ. ಇಂತಹ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿದಂತ ಅರಮನೆ ಆಶ್ರಯ ಸೇವಾ ಫೌಂಡೇಶನ್ ಅವರಿಗೆ ಸಹಾಯಧನ ನೀಡಿ, ಗೌರವಿಸಿದೆ.
ಇಂದು ಸಾಗರದಲ್ಲಿರುವಂತ ಅವರ ನಿವಾಸಕ್ಕೆ ತೆರಳಿದಂತ ಸಿದ್ಧಾಪುರದ ಅರಮನೆ ಆಶ್ರಯ ಫೌಡೇಶನ್ ನ ಅಧ್ಯಕ್ಷರಾದಂತ ನಾಗರಾಜ ಗುಡ್ಡೇಮನೆ ಅವರು, 68 ಬಾರಿ ರಕ್ತದಾನ ಹಾಗೂ 25 ಬಾರಿ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಹಾಗೂ ಸ್ಥಳೀಯ ಪತ್ರಿಕೆಯನ್ನು ನಡೆಸುತ್ತಿರುವ ವಿಜಯೇಂದ್ರ ಶಾನಭಾಗ್ ಅವರ ಸೇವೆಯನ್ನು ಗುರುತಿಸಿ ಅಭಿನಂದನಾ ಪತ್ರ ಹಾಗೂ ಸಹಾಯಧನ ನೀಡಿ, ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದಂತ ನಾಗರಾಜ ಗುಡ್ಡೇಮನೆ ಅವರು, ವಿಜಯೇಂದ್ರ ಶಾನುಭಾಗ್ ಅವರ ಸಾಮಾಜಿಕ ಸೇವೆ ಶ್ಲಾಘನೀಯವಾದದ್ದು. ಅವರ ಬದುಕಿನಲ್ಲಿ 68 ಬಾರಿ ರಕ್ತದಾನ, 25 ಬಾರಿ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರ ಏರ್ಪಡಿಸಿರೋದು ಮಾತ್ರ ಸುಲಭದ ಕೆಲಸವಲ್ಲ. ಆ ಮೂಲಕ ನೂರಾರು ಮಂದಿಗೆ ಜೀವ ದಾನಕ್ಕೆ ನೆರವಾಗಿದ್ದಾರೆ. ಕಣ್ಣು ಕಾಣದವರಿಗೆ ಶಸ್ತ್ರ ಚಿಕಿತ್ಸೆಯ ವ್ಯವಸ್ಥೆ ಮಾಡಿ, ಬೆಳಕಾಗಿದ್ದಾರೆ ಎಂಬುದಾಗಿ ವಿಜಯೇಂದ್ರ ಶಾನಭಾಗ್ ಅವರ ಸೇವೆಯನ್ನು ಕೊಂಡಾಡಿದರು.
ಈ ವೇಳೆ ಉಪಾಧ್ಯಕ್ಷರಾದ ಅರಮನೆ ಕಾರ್ತಿಕ್, ಬಸ್ ಮಾಲೀಕರಾದ ರಾಘವೇಂದ್ರ, ಹೋಟೆಲ್ ಉದ್ಯಮಿ ನಮನ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
‘ಸಾರಿಗೆ ನೌಕರ’ರ ಬಗ್ಗೆ ಕಾಳಜಿವಹಿಸುವ ನಾಟಕದ ಮಾತಾಡಲು ನಾಚಿಕೆಯಾಗುವುದಿಲ್ಲವೇ?: ಸಚಿವ ರಾಮಲಿಂಗಾರೆಡ್ಡಿ ಕಿಡಿ
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








