ವಿಜಯಪುರ: ಹೊಲಕ್ಕೆ ನೀರು ಹಾಯಿಸಲು ತೆರಳಿದ್ದಂತ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ಸಹೋದರರು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ಸುನೀಲ್ ಮಾದರ (21) ಮತ್ತು ಅನಿಲ್ ಮಾದರ (16) ಜಮೀನಿಗೆ ನೀರು ಹಾಯಿಸಲು ತೆರಳಿದ್ದರು.
ತಮಿಳುನಾಡು: ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದವನ ಜೀವ ಉಳಿಸಿದ ರಕ್ಷಣಾ ಪಡೆ… ಎದೆ ಝಲ್ಲೆನಿಸುವ ದೃಶ್ಯ ವೈರಲ್
ಇಂದು ಕಾಲುವೆ ನೀರು ಜಮೀನಿಗೆ ಹಾಯಿಸುತ್ತಿದ್ದಂತ ಸಂದರ್ಭದಲ್ಲಿ ಸಹೋದರನೊಬ್ಬ ಕಾಲುಜಾರಿ ಕಾಲುವೆಗೆ ಬಿದ್ದಿದ್ದನು. ಆತನನ್ನು ರಕ್ಷಣೆಗೆ ಧಾವಿಸಿದಂತ ಮತ್ತೊಬ್ಬ ಸಹೋದರ ಕೂಡ ಕಾಲುವೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಸಹೋದರರಿಬ್ಬರು ಒಂದೇ ದಿನ ಸಾವನ್ನಪ್ಪಿದ ವಿಷಯ ತಿಳಿದು ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರಿನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಅರ್ಹ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಣೆಗೆ ಸೂಚನೆ