ವಿಜಯಪುರ: ಇಬ್ಬರು ಹೆಣ್ಣಮಕ್ಕಳ ಜೊತೆಗೆ ಕಾಲುವೆಗೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವಂತ ಘೋರ ಘಟನೆ ವಿಜಯಪುರ ಜಿಲ್ಲೆಯ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಬಳಿಯ ಮುಳವಾಡ ಏತನೀರುವಾರಿ ಕಾಲುವೆಗೆ ಇಬ್ಬರು ಹೆಣ್ಣಮಕ್ಕಳ ಜೊತೆಗೆ ತಾಯಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ, ಇಂದು ನಡೆದಿದೆ.
BIGG NEWS: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ; ಮತ್ತೆ ಹೆಚ್ಚಾದ ರಸ್ತೆಗುಂಡಿಗಳು, ವಾಹನ ಸವಾರರ ಪರದಾಟ
ಆತ್ಮಹತ್ಯೆಗೆ ಶರಣಾದವರನ್ನು ತಾಯಿ ರೇಣುಕಾ ಅಮೀನಪ್ಪ ಕೋನಿನ್(26) ಹಾಗೂ ಮಕ್ಕಳಾದಂತ ಯಲ್ಲವ್ವ(2) ಅಮೃತಾ(1) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಅಗ್ನಿಶಾಮಕ ಸಿಬ್ಬಂದಿಗಳು ಶವಗಳ ಪತ್ತೆಕಾರ್ಯ ನಡೆಸುತ್ತಿದ್ದಾರೆ.