ಉಡುಪಿ: ಜಿಲ್ಲೆಯಲ್ಲಿ ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭಕ್ತಸಾಗರ ಹರಿದುಬರುತ್ತಿದೆ
ಮೂಕಾಂಬಿಕಾ ಕ್ಷೇತ್ರದಲ್ಲಿ ಅಕ್ಷರಭ್ಯಾಸ ಸಂಪನ್ನವಾಗಿದ್ದು, ಕೊಲ್ಲೂರಿನಲ್ಲಿ ನವರಾತ್ರಿ ವೈಶಿಷ್ಟ್ಯ ಎಂದರೆ ವಿದ್ಯಾರಂಭ. ಚಿಕ್ಕ ಮಕ್ಕಳಿಗೆ ಇಲ್ಲಿನ ಸರಸ್ವತಿ ಗುಡಿ ಮುಂದೆ ವಿದ್ಯಾರಂಭ ಮಾಡಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವ ನಂಬಿಕೆ. ದೇವರ ಸನ್ನಿಧಿಯಲ್ಲಿ ಮಗುವಿಗೆ ವಿದ್ಯಾದೇವತೆ ಸರಸ್ವತಿ ಹೆಸರನ್ನು ಅಕ್ಕಿಯಲ್ಲಿ ಬರೆಯುವ ಮೂಲಕ ಅಕ್ಷರಭ್ಯಾಸ ನಡೆಯುತ್ತೆ. ಸಾವಿರಾರು ಭಕ್ತರು ದೇವಿ ಸನ್ನಿಧಾನದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ನಡೆಸಿದರು.