ನೋಯ್ಡಾ: ನೋಯ್ಡಾದಲ್ಲಿ ಮಹಿಳೆಯೊಬ್ಬರು ಹೌಸಿಂಗ್ ಸೊಸೈಟಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಂದಿಸುತ್ತಿರುವ ವಿಡಿಯೋವೊಂದು ವೈರಲ್ ಅಗುತ್ತಿದೆ.
ವಿಡಿಯೋದಲ್ಲಿ, ಮಹಿಳೆಯೊಬ್ಬರು ಪಂಕಜ್ ಎಂಬ ಹೆಸರಿನ ಸೆಕ್ಯುರಿಟಿ ಗಾರ್ಡ್ನ ಕಾಲರ್ನ ಹಿಡಿದು ಅವನ ಕ್ಯಾಪ್ ಅನ್ನು ಕಿತ್ತು ಎಸೆದಿರುವುದನ್ನು ನೋಡಬಹುದು. ಇದೇ ವೇಳೆ ಆತನನ್ನು ನಿಂದಿಸುತ್ತಿರುವ ಮಾತುಗಳನ್ನು ಕೇಳಬಹುದು.
#ViralVideo
Woman misbehaves with security guard at #Noida‘s Ajnara Society, and grabs his collar; case filed. pic.twitter.com/245ZzwFL2Z— Sumit (@SumitHansd) October 8, 2022
ಈ ಘಟನೆಯು ನೋಯ್ಡಾದ ಅಜ್ನಾರಾ ಹೋಮ್ಸ್ ಸೊಸೈಟಿಯಲ್ಲಿ ನಡೆದಿದೆ. ಸೆಕ್ಯುರಿಟಿ ಗಾರ್ಡ್ನನ್ನು ನಿಂದಿಸಿದ ಮಹಿಳೆಯನ್ನು ದೀಕ್ಷಾ ಎಂದು ಗುರುತಿಸಲಾಗಿದೆ.
ಘಟನೆ ವೇಳೆ ಮಹಿಳೆ ಮಾತಿಗೆ ಹಿಂತಿರುಗಿಸಿ ಮಾತನಾಡದೇ ಕೈಕಟ್ಟಿ ನಿಂತಿದ್ದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ದೀಕ್ಷಾಳ ಸ್ನೇಹಿತೆ ಕಾಕುಲ್ ಮತ್ತು ದೀಕ್ಷಾಳ ಸಹೋದರಿ ಅಂಜಲಿಯನ್ನು ಪೊಲೀಸರು ಬಂಧಿಸಿದ್ದು, ದೀಕ್ಷಾ ನಾಪತ್ತೆಯಾಗಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ನೋಯ್ಡಾ ಮತ್ತು ಗುರ್ಗಾಂವ್ನಿಂದ ಇಂತಹ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ.
ಇಂದು ಮುಂಜಾನೆ ಮಧ್ಯ ಗ್ರೀಸ್ನಲ್ಲಿ 5. ತೀವ್ರತೆಯ ಭೂಕಂಪ | Earthquake in Greece