ಇರಾನ್: ಇರಾನ್ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದ್ದು, 41 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 700 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನೆಯ ವೇಳೆ ಸಾವನ್ನಪ್ಪಿದ ಜವಾದ್ ಹೇದರಿ ಎಂಬ ವ್ಯಕ್ತಿಯ ಸಹೋದರಿ ತನ್ನ ಕೂದಲು ಕತ್ತರಿಸಿ ಅವನ ಸಮಾಧಿಯ ಮೇಲೆ ಹಾಕುತ್ತಿರುವ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದೆ.
Javad Heydari’s sister, who is one of the victims of protests against the murder of #Mahsa_Amini, cuts her hair at her brother’s funeral.#IranRevolution #مهسا_امینیpic.twitter.com/6PJ21FECWg
— 1500tasvir_en (@1500tasvir_en) September 25, 2022
22 ವರ್ಷದ ಮಹ್ಸಾ ಅಮಿನಿ ಸಾರ್ವಜನಿಕವಾಗಿ ಹಿಜಾಬ್ ಧರಿಸದಿದ್ದಕ್ಕಾಗಿ ಆಕೆಯನ್ನು ಇರಾನ್ನ ನೈತಿಕತೆಯ ಪೋಲೀಸರು ಬಂಧಿಸಿದ್ದರು. ಕಸ್ಟಡಿಯಲ್ಲಿದ್ದಾಗ ತೀವ್ರ ಹಿಂಸೆಗೊಳಗಾದ ಅಮಿನಿ ಸಾವನ್ನಪ್ಪಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ತಿರುಗಿತು.
ಇಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಜಾವದ್ ಹೇದರಿ ಅವರ ಸಮಾಧಿಯ ಮೇಲೆ ದುಃಖಿತರಾದ ಮಹಿಳೆಯರು ಹೂಗಳನ್ನು ಎಸೆಯುತ್ತಿರುವುದು, ಆತನ ಸಹೋದರಿ ತನ್ನ ತಲೆ ಕೂದಲು ಕತ್ತರಿಸುತ್ತಿರುವುದನ್ನು ನೋಡಬಹುದು.
BIG NEWS: ಉಗ್ರವಾದಕ್ಕೆ ಬೆಂಬಲ ಆರೋಪ : `PFI’ ನಿಷೇಧಕ್ಕೆ ಕೇಂದ್ರ ಸರ್ಕಾರ ಚಿಂತನೆ
BIGG NEWS : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಚೇತರಿಕೆ : 2-3 ದಿನದಲ್ಲಿ ಡಿಸ್ಚಾರ್ಜ್ ಸಾಧ್ಯತೆ