ನವದೆಹಲಿ: ಇಂದು ಬೆಳಗ್ಗೆ ನೈಋತ್ಯ ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಯುವಕರು 17 ವರ್ಷದ ಶಾಲಾ ಬಾಲಕಿಯ ಮೇಲೆ ಆಸಿಡ್ ದಾಳಿ ಮಾಡಿದ್ದು, ಸಂತ್ರಸ್ತೆ ಸ್ಥಿತಿ ಗಂಭೀರವಾಗಿದೆ.
ಇನ್ನೂ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಇಬ್ಬರು ಹುಡುಗಿಯರು ರಸ್ತೆಬದಿಯಲ್ಲಿ ನಿಂತಿದ್ದು, ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರಲ್ಲಿ ಒಬ್ಬ ಯುವತಿಗೆ ಆಸಿಡ್ ಎರಚಿ ಪರಾರಿಯಾಗಿದ್ದಾನೆ. ಬಾಲಕಿ ಕೂಡ ನೋವಿನಿಂದ ನರಳುವುದನ್ನು ನೋಡಬಹುದು.
दिल्ली के द्वारका मोड़ इलाके में एक स्कूली छात्रा पर बाइक सवार दो लड़कों ने तेजाब फेंक दिया. pic.twitter.com/X5ZIXGEsVS
— Asheesh Kumar Mishra (@Asheesh17604450) December 14, 2022
ಬಾಲಕಿಯ ಮುಖ ಹಾಗೂ ಕಣ್ಣಿಗೆ ಆಸಿಡ್ ಬಿದ್ದಿದ್ದು, ಆಕೆ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಬಾಲಕಿ, ಇಬ್ಬರು ಶಂಕಿತರನ್ನು ಗುರುತಿಸಿದ್ದು, ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ಹಾಡಹಗಲೇ ಶಾಲಾ ಬಾಲಕಿ ಮೇಲೆ ಆ್ಯಸಿಡ್ ದಾಳಿ : ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
‘https://kannadanewsnow.com/kannada/acid-attack-on-school-girl-in-broad-daylight-admitted-to-hospital/