ಬಿಹಾರ : ಮುಸ್ಲಿಂ ಯುವತಿಯನ್ನು ದಲಿತ ಯುವಕ ಪ್ರೀತಿಸಿದ್ದಕ್ಕಾಗಿ ನೆಲವನ್ನು ನೆಕ್ಕುವಂತೆ ಧಾರ್ಮಿಕ ಮೂಲಭೂತವಾದಿಗಳು ಒತ್ತಾಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
HEALTH TIPS: ‘ಗಂಟಲಿನ ಹುಣ್ಣು’ಗಳನ್ನು ಹೋಗಲಾಡಿಸಲು ಇಲ್ಲಿವೆ 5 ಸಿಂಪಲ್ ಮನೆಮದ್ದುಗಳು| Throat ulcers
ಮುಸ್ಲಿಂ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ದಲಿತ ಯುವಕನನ್ನು ಥಳಿಸಲಾಗಿದೆ. ಯುವಕನನ್ನು ನೆಲಕ್ಕೆ ಹಾಕಿದ ನಂತರ, ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬನು ತನ್ನ ನಾಲಿಗೆಯಿಂದ ನೆಲವನ್ನು ಸ್ವಚ್ಛಗೊಳಿಸಲು ಕೇಳುತ್ತಾನೆ. ಇನ್ನು ಕೆಲವರು ಸುತ್ತಮುತ್ತಲಿನ ಯುವಕರನ್ನು ಥಳಿಸುತ್ತಿರುವುದು ಕಂಡು ಬಂದಿದೆ.
HEALTH TIPS: ‘ಗಂಟಲಿನ ಹುಣ್ಣು’ಗಳನ್ನು ಹೋಗಲಾಡಿಸಲು ಇಲ್ಲಿವೆ 5 ಸಿಂಪಲ್ ಮನೆಮದ್ದುಗಳು| Throat ulcers
ಯುವಕ ಉಜಿಯಾರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶರಿ ಗ್ರಾಮದ ನಿವಾಸಿ. ಈತ ವಿಭೂತಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಖಾಬೀಬ್ ಗ್ರಾಮದ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಬೈಕ್ನಲ್ಲಿ ಹೋಗುತ್ತಿರುವುದನ್ನು ನೋಡಿದ ಸಂಬಂಧಿಕರು ಹಾಗೂ ಮತೀಯವಾದಿಗಳು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.