ಮೆಕ್ಸಿಕೋ: ಉತ್ತರ ಅಮೆರಿಕದ ಮೆಕ್ಸಿಕೋದಲ್ಲಿ ದೊಡ್ಡ ರೈಲು ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ರೈಲು ತೈಲ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಹೊತ್ತಿ ಹುರಿದಿದೆ. ಘಟನೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ಘಟನೆ ಗುರುವಾರ ನಡೆದಿದೆ. ಘಟನೆ ವೇಳೆ ಅಕ್ಕಪಕ್ಕದ ಹಲವು ಮನೆಗಳು ಬೆಂಕಿಗಾಹುತಿಯಾಗಿದ್ದು, ಆ ಪ್ರದೇಶದ ಸುತ್ತ ದಟ್ಟ ಹೊಗೆ ಆವರಿಸಿದೆ. ಘಟನೆ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದಾರೆ. ದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸರಕು ರೈಲು ಜ್ವಾಲೆಯ ನಡುವೆಯೂ ಹಾದು ಹೋಗುತ್ತಿರುವುದನ್ನು ನೋಡಬಹುದು.
#BREAKING: Cargo train drives through flames after crashing into fuel truck in central Mexico, setting dozens of homes on fire -BNO #BreakingNews pic.twitter.com/qYp8tmpwDE
— Breaking 4 News (@Breaking_4_News) October 21, 2022
BREAKING: Cargo train drives through flames after crashing into fuel truck in central Mexico, setting dozens of homes on fire pic.twitter.com/QLc4eV6xhk
— BNO News (@BNONews) October 21, 2022
ಟ್ಯಾಂಕರ್ ಅಲ್ಲಿದ್ದ ಮೇಲ್ಸೇತುವೆಗೆ ಡಿಕ್ಕಿ ಹೊಡೆದಿದ್ದು, ಹತ್ತಿರದ ವಸತಿ ಪ್ರದೇಶಕ್ಕೆ ಬೆಂಕಿ ಹಚ್ಚಿದ ನಂತರ 800 ರಿಂದ 1,000 ಜನರನ್ನು ಸ್ಥಳಾಂತರಿಸಲಾಗಿದೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು ಅಗ್ವಾಸ್ಕಾಲಿಯೆಂಟೆಸ್ ಅಗ್ನಿಶಾಮಕ ಮುಖ್ಯಸ್ಥ ಮಿಗುಯೆಲ್ ಮುರಿಲ್ಲೊ ಹೇಳಿದ್ದಾರೆ.
BIG NEWS: ಇಂದು ಕೇದಾರನಾಥ, ಬದರಿನಾಥಕ್ಕೆ ಪ್ರಧಾನಿ ಮೋದಿ ಭೇಟಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ
BIGG NEWS : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬಿಗ್ ಶಾಕ್ : ಖಾಸಗಿ ಬಸ್ ಟಿಕೆಟ್ ದರ ಭಾರೀ ಏರಿಕೆ!